ಅಡುಗೆಮನೆ ಚಾಕು ಶುಚಿಗೊಳಿಸಲು ಇಲ್ಲಿದೆ ನೋಡಿ ಟಿಪ್ಸ್

ಭಾನುವಾರ, 28 ಜನವರಿ 2018 (06:40 IST)
ಬೆಂಗಳೂರು: ಅಡುಗೆ ಮನೆಯಲ್ಲಿ ಚಾಕುಗಳಿಗೆ ತುಂಬಾ ಮಹತ್ವವಿದೆ. ಅವುಗಳ ಸಹಾಯವಿಲ್ಲದೆ ತರಕಾರಿಗಳನ್ನು ಕತ್ತರಿಸಲು ಸಾಧ್ಯವಿಲ್ಲ. ತರಕಾರಿಗಳನ್ನು ಕತ್ತರಿಸಿದ ನಂತರ ಚಾಕುವಿನ ನಿರ್ವಹಣೆ ಮಾಡಬೇಕು. ತಪ್ಪಿದರೆ ಧೂಳು, ಕೀಟಾಣುಗಳು ತರಕಾರಿಯ ಜತೆಗೆ ಹೊಟ್ಟೆಯನ್ನು ಸೇರುತ್ತವೆ.


ಕಬ್ಬಿಣದ ಚಾಕುಗಳಿದ್ದರೆ ಬಹುಬೇಗ ತುಕ್ಕು ಹಿಡಿಯುತ್ತವೆ. ಆದ್ದರಿಂದ ಅವುಗಳನ್ನು ನಿತ್ಯ ನಿರ್ವಹಣೆ ಅಗತ್ಯ. ತುಕ್ಕು ಹಿಡಿದಿದ್ದರೆ ಅವುಗಳನ್ನು ನಿಂಬೆ, ಅಡುಗೆ ಸೋಡ ಬಳಸಿ ಬ್ರಷ್‌ನಿಂದ ಉಜ್ಜಿ ತೊಳೆದರೆ ತುಕ್ಕು ಹೋಗುತ್ತದೆ.


ಸ್ಟೀಲ್‌ ಚಾಕುವನ್ನು ಬಳಸುವಾಗ ತರಕಾರಿ, ಹಣ್ಣುಗಳನ್ನು ಕತ್ತರಿಸುವ ಮೊದಲು ಹಾಗೂ ನಂತರ ನೀರಿನಿಂದ ತೊಳೆದು ಬಳಸಬೇಕು. ಇದರಿಂದ ಅದರಲ್ಲಿರುವ ಧೂಳು ನಿವಾರಣೆಯಾಗುತ್ತದೆ.


ಪ್ಲಾಸ್ಟಿಕ್‌ ಹಿಡಿಗಿಂತ ಮರದ ಹಿಡಿ ಇರುವ ಚಾಕು ಬೆಸ್ಟ್‌. ಯಾಕೆಂದರೆ ಮರದ ಹಿಡಿಯಿಂದ ಸುಲಭವಾಗಿ ಕತ್ತರಿಸಬಹುದು ಹಾಗೂ ದೀರ್ಘಕಾಲ ಬಾಳಿಕೆ ಬರುತ್ತದೆ.


ಅಡುಗೆ ಮನೆಯಲ್ಲಿ ಚಾಕುವನ್ನು ಮಕ್ಕಳ ಕೈಗೆ ಸಿಗದಂತೆ ಎಚ್ಚರವಹಿಸಬೇಕು. ವೆಜಿಟೆಬಲ್‌ ಕಟ್ಟರನ್ನು ಬಳಸುತ್ತಿದ್ದೀರಿ ಎಂದಾದರೆ ದಿನಕ್ಕೆ ಒಮ್ಮೆ ಚೆನ್ನಾಗಿ ಶುಚಿಗೊಳಿಸಿ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ