ಮೊದಲು ಬೇಳೆಯನ್ನು ಪರಿಮಳ ಬರುವವರೆಗೆ ಹುರಿದುಕೊಂಡು ನಂತರ ಕುಕ್ಕರಿನಲ್ಲಿ ಒಂದೂವರೆ ಕಪ್ ನೀರು ಮತ್ತು ಒಂದು ಟೀ ಚಮಚ ತುಪ್ಪ ಹಾಕಿ ಮೂರು ವಿಷಲ್ ಬರುವವರೆಗೆ ಬೇಯಿಸಿಕೊಳ್ಳಬೇಕು. ನಂತರ ರವೆಯನ್ನು ಬಣ್ಣ ಬದಲಾವಣೆ ಆಗುವವರೆಗೆ ಹುರಿದುಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಂಡು ಅದಕ್ಕೆ ಗೋಡಂಬಿ ಚೂರುಗಳು, ಕರಿಬೇವು, ಹಸಿ ಶುಂಠಿ, ಕಾಳುಮೆಣಸು, ಇಂಗು, ಕತ್ತರಿಸಿದ ಹಸಿ ಮೆಣಸಿನಕಾಯಿ, ಜೀರಿಗೆಯನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ನಂತರ ಈ ಒಗ್ಗರಣೆಗೆ ಬೇಯಿಸಿಕೊಂಡ ಬೇಳೆ ಮತ್ತು ಹುರಿದ ರವೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ರುಚಿಗ ತಕ್ಕಷ್ಟು ಉಪ್ಪನ್ನು ಹಾಕಬೇಕು. ನಂತರ ಇದು ಚೆನ್ನಾಗಿ ಬೇಯುವವರೆಗೆ ಸಣ್ಣ ಉರಿಯಲ್ಲಿ ಮುಚ್ಚಿ ಬೇಯಿಸಬೇಕು. ನಂತರ ಒಲೆಯಿಂದ ಅದನ್ನು ಇಳಿಸಿ ಬಿಸಿ ಇರುವಾಗಲೇ ತುಪ್ಪವನ್ನು ಅದರ ಮೇಲೆ ಹಾಕಿ ಕಾಯಿ ಚಟ್ನಿಯೊಂದಿಗೆ ಸವಿಯಬಹುದು.