ರಾಗಿ ಹಿಟ್ಟಿನ ಕೇಕ್

ಬುಧವಾರ, 3 ಅಕ್ಟೋಬರ್ 2018 (18:20 IST)
ಕೇಕ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ!! ಸಾಮಾನ್ಯವಾಗಿ ಎಲ್ಲಾ ಸಭೆ ಸಮಾರಂಭಗಳಲ್ಲಿ, ಚಿಕ್ಕ ಪುಟ್ಟ ಪಾರ್ಟಿಗಳಲ್ಲಿ,  ಹೆಚ್ಚಾಗಿ ಈಗ ಕೇಕ್ ಅನ್ನೇ ಕಟ್ ಮಾಡಿ ಸಂಭ್ರಮಿಸುತ್ತಾರೆ. ಅದರಲ್ಲಿಯೂ ಮೊಟ್ಟೆಯನ್ನು ಹಾಕದೇ ಕೇಕ್ ಅನ್ನು ಮಾಡುವುದು ಕಷ್ಟ ಆದರೂ ಈ ರಾಗಿ ಹಿಟ್ಟಿನ ಕೇಕ್ ರುಚಿಯಲ್ಲಿ ರಾಡಿಯಾಗುವ ಮಾತೇ ಇಲ್ಲ. ಸರಳವಾಗಿ, ರುಚಿಯಾಗಿ ರಾಗಿಹಿಟ್ಟಿನಿಂದ ಕೇಕ್ ತಯಾರಿಸಬಹುದು. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..
ಬೇಕಾಗುವ ಸಾಮಗ್ರಿಗಳು :
* 2 ಕಪ್ ರಾಗಿ ಹಿಟ್ಟು
* 1 ಕಪ್ ಎಣ್ಣೆ
* 1 ಕಪ್ ಹಾಲು
* 200 ಗ್ರಾಂ ಕಂಡೆನ್ಸ್ ಹಾಲು ಅಥವಾ ಮಿಲ್ಕ್ ಮೈಡ್
* 1 ಟೀ ಸ್ಪೂನ್ ಸ್ಟ್ರಾಬೆರಿ ಎಸ್ಸೆನ್ಸ್
* 1 ಟೀ ಸ್ಪೂನ್ ಬೇಕಿಂಗ್ ಸೋಡಾ
* 1 ಟೀ ಸ್ಪೂನ್ ಬೇಕಿಂಗ್ ಪೌಡರ್
* ಸ್ವಲ್ಪ ನೀರು (ಬೇಕಾದರೆ)
 
ತಯಾರಿಸುವ ವಿಧಾನ :
  ಮೊದಲು ರಾಗಿಹಿಟ್ಟು, ಸೋಡಾ ಮತ್ತು ಬೇಕಿಂಗ್ ಪೌಡರ್ ಅನ್ನು ಜರಡಿ ಹಿಡಿದು ಸಾಣಿಸಿಕೊಳ್ಳಬೇಕು. ಏಕೆಂದರೆ ಅದರ ಹೊಟ್ಟು ಇದ್ದರೆ ರುಚಿಸುವುದಿಲ್ಲ. ನಂತರ ಒಂದು ಪಾತ್ರೆಗೆ ಮಿಲ್ಕ್ ಮೈಡ್ ಮತ್ತು ಎಣ್ಣೆ, ಹಾಲು ಬೆರೆಸಿ ಮಿಕ್ಸ್ ಮಾಡಿ ಅದು ಬೆರೆತ ನಂತರ ಎಸ್ಸೆನ್ಸ್ ಹಾಕಿ ಬೆರೆಸಬೇಕು. ಈ ಮಿಶ್ರಣ ಗಟ್ಟಿಯಾದರೆ ಮಾತ್ರ ನೀರನ್ನು ಬಳಸಿ ಇಡ್ಲಿ ಹಿಟ್ಟಿನ ಹದವಾಗಿಸಿಕೊಳ್ಳಬೇಕು. ನಂತರ ಇದನ್ನು 180 ಡಿಗ್ರಿ ಹೀಟ್‌ನಲ್ಲಿ ಓವನ್‌ನಲ್ಲಿ ಇಡಬೇಕು. ನಂತರ ಗ್ರೀಸ್ ಮಾಡಿದ ಮೌಲ್ಡ್‌ಗೆ ಹಿಟ್ಟನ್ನು ಹಾಕಿ 40 ನಿಮಿಷ ಬೇಕ್ ಮಾಡಬೇಕು. ನಂತರ ಅದನ್ನು ತೆಗೆದು ಚಾಕುವಿನಿಂದ ಸರಿಯಾಗಿ 3 ಭಾಗವಾಗಿ ಕಟ್ ಮಾಡಬೇಕು. ಅದಕ್ಕೆ ಸ್ಟ್ರಾಬೆರಿ ಎಸ್ಸೆನ್ಸ್‌ನ್ನು ಹಾಕಿ ಮೆತ್ತಗೆ ಮಾಡಿಕೊಳ್ಳಬೇಕು. ನಂತರ ವಿಪ್ಪಿಂಗ್ ಕ್ರೀಮ್‌ನಿಂದ ಕೇಕ್‌ನ್ನು ಅಲಂಕರಿಸಬಹುದು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ