ಇತ್ತೀಚಿನ ವಿದ್ಯಮಾನದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಸಮಸ್ಯೆ ಎಂದರೆ ಅಸಿಡಿಟಿ. ಈ ಅಸಿಡಿಟಿಯು ಮನುಷ್ಯನ ಜೀವನದಲ್ಲಿ ಒಂದಲ್ಲಾ ಒಂದು ಬಾರಿ ಅನುಭವವಾಗಿರುತ್ತದೆ. ಇದು ಒಂದು ರೀತಿಯ ಖಾಯಿಲೆಯೂ ಅಲ್ಲ, ಒಳ್ಳೆಯ ಆರೋಗ್ಯದ ಸಂಕೇತವೂ ಅಲ್ಲ. ಅಸಿಡಿಟಿಯನ್ನು ನಿರ್ಲಕ್ಷಿಸಲೂಬಾರದು. ಅಸಿಡಿಟಿಗೆ ಕೆಲವು ಮನೆಮದ್ದುಗಳಿವೆ. ಅಂತಹ ಪರಿಹಾರೋಪಾಯಗಳು ಯಾವುವು ಎಂಬುದನ್ನು ನೋಡೋಣ..
* ಜಾಸ್ತಿ ತಂಪು ಪಾನೀಯ ಮತ್ತು ಕೆಫಿನ್‌ಯುಕ್ತ ಪಾನೀಯಗಳನ್ನು ಸೇವಿಸಬಾರದು.
* ಅಧಿಕವಾಗಿ ಅಸಿಡಿಟಿಯ ತೊಂದರೆ ಇದ್ದರೆ ಮುಂಜಾನೆಯ ವೇಳೆ ಖಾಲಿ ಹೊಟ್ಟೆಯಲ್ಲಿ 2 ಗ್ಲಾಸ್ ನಿಂಬೆ ಹಣ್ಣಿನ ರಸ ಬೆರೆಸಿದ ನೀರನ್ನು ಕುಡಿದರೆ ಹೊಟ್ಟೆ ಶುಚಿಯಾಗುವುದಲ್ಲದೇ ಅಧಿಕ ತೂಕವು ನಿಯಂತ್ರಣವಾಗುವುದು.
* ಸಮಯಕ್ಕೆ ಸರಿಯಾಗಿ ಸಮ ಪ್ರಮಾಣದಲ್ಲಿ ಊಟ ಮಾಡುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
* 1 ಚಮಚ ಪುದೀನಾ ರಸಕ್ಕೆ 1/2 ನಿಂಬೆ ರಸ ಮತ್ತು 1 ಚಮಚ ಜೇನುತುಪ್ಪ ಸೇರಿಸಿ ಕುಡಿದರೆ ಎದೆ ಉರಿ ನಿವಾರಣೆಯಾಗುತ್ತದೆ.
* 1 ಚಮಚ ಕೊತ್ತಂಬರಿ ಬೀಜವನ್ನು 2 ಲೋಟ ತಣ್ಣೀರಿನಲ್ಲಿ ಹಾಕಿ ನೆನೆಸಿ ನಂತರ ಸೋಸಿದ ನೀರನ್ನು ಕುಡಿದರೆ ಅಸಿಡಿಟಿ ಗುಣವಾಗುತ್ತದೆ.
* ಪ್ರತಿದಿನ 1 ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
* ಮುಂಜಾನೆಯ ಉಪಾಹಾರವನ್ನು ಕಡ್ಡಾಯವಾಗಿ ಸೇವಿಸುವುದರಿಂದ ಅಸಿಡಿಟಿಯು ನಿವಾರಣೆಯಾಗುತ್ತದೆ.
* ಮದ್ಯಪಾನ, ಧೂಮಪಾನ, ಗುಟಕಾ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
* ನಿಯಮಿತ ಪ್ರಮಾಣದಲ್ಲಿ ಗುಲ್ಕಂದ್ ಸೇವಿಸುವುದರಿಂದ ಅಸಿಡಿಟಿಯು ನಿವಾರಣೆಯಾಗುತ್ತದೆ.
* ಕ್ಷಾರೀಯ ಗುಣವನ್ನು ಹೊಂದಿರುವ ಆಹಾರ ಪದಾರ್ಥಗಳ ಬಳಕೆ ಹೆಚ್ಚು ಮಾಡುವುದು ಅಥವಾ ಆಹಾರದಲ್ಲಿ ಶುಂಠಿಯ ಬಳಕೆಯನ್ನು ಮಾಡುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
* ಬೂದುಗುಂಬಳ ರಸಕ್ಕೆ ಕಲ್ಲುಸಕ್ಕರೆ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅಸಿಡಿಟಿಯು ಗುಣವಾಗುತ್ತದೆ.
* ತಣ್ಣಗಿನ ಹಾಲು, ಕೆನೆ ತೆಗೆದ ಹಾಲನ್ನು ಕುಡಿಯುವುದರಿಂದ ಅಸಿಡಿಟಿಯ ಮೇಲೆ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.