ಉಬ್ಬು ರೊಟ್ಟಿ ಜತೆ ತಿನ್ನಲು ಖಡಕ್ ಬಸಳೆ ಸೊಪ್ಪಿನ ಸಾಂಬಾರ್

ಬುಧವಾರ, 18 ಜನವರಿ 2017 (11:11 IST)
ಬೆಂಗಳೂರು: ಉಬ್ಬು ರೊಟ್ಟಿ ಮಾಡುವುದು ಹೇಗೆಂದು ತಿಳಿಸಿದ್ದೇವೆ. ಇದಕ್ಕೆ ಸೇರುವಂತಹ ಖಡಕ್ ಬಸಳೆ ಸೊಪ್ಪಿನ ಸಾಂಬಾರ್ ಮಾಡುವುದನ್ನು ತಿಳಿಸಿಕೊಡುತ್ತೇವೆ. ಉಬ್ಬು ರೊಟ್ಟಿಗೆ ಇದು ಪರ್ಫೆಕ್ಟ್ ಕಾಂಬಿನೇಷನ್.

ಬೇಕಾಗುವ ಸಾಮಗ್ರಿಗಳು

ಬಸಳೆ ಸೊಪ್ಪು
ಒಣ ಮೆಣಸು
ಖಾರದ ಪುಡಿ
ಅರಸಿನ ಪುಡಿ
ಬೆಲ್ಲ
ಧನಿಯಾ ಕಾಳು
ಉದ್ದಿನ ಬೇಳೆ
ಕಾಯಿ ತುರಿ
ಬೆಳ್ಳುಳ್ಳಿ
ಹಲಸಿನ ಬೀಜ/ತೊಗರಿ ಬೇಳೆ
ಹುಣಸೆ ಹುಳಿ
ಉಪ್ಪು

ಮಾಡುವ ವಿಧಾನ

ಬಸಳೆ ಸೊಪ್ಪನ್ನು ಚೆನ್ನಾಗಿ ತೊಳೆದುಕೊಂಡು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಇದಕ್ಕೆ ಉಪ್ಪು, ಹುಳಿ, ಬೆಲ್ಲ, ಖಾರದ ಪುಡಿ, ಅರಸಿನ ಪುಡಿ ಹಾಕಿಕೊಂಡು ಬೇಯಿಸಿ. ಹಲಸಿನ ಬೀಜವಿದ್ದರೆ ಹಲಸಿನ ಬೀಜ ಇಲ್ಲವೆಂದರೆ ಸ್ವಲ್ಪ ತೊಗರಿ ಬೇಳೆಯನ್ನೂ ಬೇಯಿಸಿಕೊಳ್ಳಿ.  ಬಾಣಲೆಯಲ್ಲಿ ಉದ್ದಿನ ಬೇಳೆ, ಧನಿಯಾ ಕಾಳು, ಒಣ ಮೆಣಸು, ಬೆಳ್ಳುಳ್ಳಿ ಹುರಿದುಕೊಳ್ಳಿ. ಇದನ್ನು ಕಾಯಿ ತುರಿಯೊಂದಿಗೆ ನುಣ್ಣಗೆ ರುಬ್ಬಿ.  ಈ ಮಸಾಲೆಯನ್ನು ಬೇಯಿಸಿದ ಸೊಪ್ಪಿನೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಇದಕ್ಕೆ ಸಾಸಿವೆ ಒಗ್ಗರಣೆ ಕೊಟ್ಟರೆ ಬಸಳೆ ಸೊಪ್ಪಿನ ಸ್ಪೆಷಲ್ ಸಾಂಬಾರ್ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ