ತಯಾರಿಸುವ ವಿಧಾನ:
ನೀರಿನ ಅಂಶವಿಲ್ಲದ ಸುವರ್ಣಗಡ್ಡೆಯನ್ನು ಸಿಪ್ಪೆ ತೆಗೆದು ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ನಂತರ ಮೈದಾ ಹಿಟ್ಟು, ಕಡಲೆ ಹಿಟ್ಟು, ಮೆಣಸಿನ ಪುಡಿ, ನಿಂಬೆರಸ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಹಾಕಿ ಚೆನ್ನಾಗಿ ಕಲೆಸಿರಿ. ಕತ್ತರಿಸಿಟ್ಟಿಕೊಂಡಿದ್ದ ಸುವರ್ಣಗಡ್ಡೆಯನ್ನು ಅದಕ್ಕೆ ಸೇರಿಸಿ 10 ನಿಮಿಷ ಮುಚ್ಚಿಡಿ, ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಕಲೆಸಿಕೊಂಡಿರುವ ಸುವರ್ಣ ಗಡ್ಡೆಯನ್ನು ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಪ್ರೈ ಮಾಡಿ. ನಿಮಗೆ ತಿನ್ನಲು ರುಚಿಯಾದ ಸುವರ್ಣ ಗಡ್ಡೆಯ ಕಬಾಬ್ ಸಿದ್ಧವಾಗಿರುತ್ತದೆ.