ಬಾಯಲ್ಲಿ ನೀರೂರಿಸುವ ಬೀಟ್ ರೂಟ್ ಹಲ್ವಾ

ಮಂಗಳವಾರ, 3 ಜನವರಿ 2017 (12:22 IST)
ಬೆಂಗಳೂರು: ಕ್ಯಾರೆಟ್ ಹಲ್ವಾದಂತೇ ಬೀಟ್ ರೂಟ್ ಹಲ್ವಾ ಕೂಡಾ ಸರಳ, ಸುಲಭವಾಗಿ ಮಾಡಬಲ್ಲ ಸಿಹಿ ತಿನಿಸು. ಬಾಯಲ್ಲಿ ನೀರೂರಿಸುವಂತಹ ಬೀಟ್ ರೂಟ್ ಹಲ್ವಾ ಮಾಡುವುದು ಹೇಗೆಂದು ತಿಳಿದುಕೊಳ್ಳಿ.

 
ಬೇಕಾಗುವ ಸಾಮಗ್ರಿಗಳು


ಬೀಟ್ ರೂಟ್
ಸಕ್ಕರೆ
ಹಾಲು
ತುಪ್ಪ
ಏಲಕ್ಕಿ

ಮಾಡುವ ವಿಧಾನ

ಬೀಟ್ ರೂಟ್ ತುರಿದು ಹಬೆಯಲ್ಲಿ ಬೇಯಿಸಿಕೊಳ್ಳಿ. ಬೆಂದ ಮೇಲೆ ಹಾಲು, ಸಕ್ಕರೆ ಹಾಕಿ ತಿರುವಿ. ಗಟ್ಟಿಯಾಗುತ್ತಾ ಬರುವಾಗ ತುಪ್ಪ ಹಾಕುತ್ತಾ ಮತ್ತಷ್ಟು ತಿರುವಿಕೊಳ್ಳಿ. ತಳ ಬಿಟ್ಟು ಬರುವಾಗ ಏಲಕ್ಕಿ ಹಾಕಿ ತುಪ್ಪ ಸವರಿದ ಬಟ್ಟಲಿಗೆ ಸುರಿದುಕೊಳ್ಳಿ. ಇದನ್ನು ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಬಹುದು ಅಥವಾ ಕ್ಯಾರೆಟ್ ಹಲ್ವಾದಂತೆ ತಿನ್ನಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ