ಒಂದು ನಾನ್‍ಸ್ಟಿಕ್ ಪ್ಯಾನ್‍ಗೆ ಹಾಲು ಹಾಕಿ ಕುದಿಸಿ, ಅದಕ್ಕೆ 3 ಚಮಚ ತುಪ್ಪ ಸೇರಿಸಿರಿ. ಬಳಿಕ ಅದಕ್ಕೆ ಹಾಲಿನ ಪೌಡರ್ ಹಾಕಿ ಗಂಟು ಕಟ್ಟದಂತೆ ತಿರುಗಿಸಿ. ಹಾಲು – ತುಪ್ಪದೊಂದಿಗೆ ಪೌಡರ್ ಮಿಕ್ಸ್ ಆಗುವ ತನಕ ಕೈ ಬಿಡದೆ ತಿರುಗಿಸಿ. ನಂತರ ಸಕ್ಕರೆ ಸೇರಿಸಿ ತಳ ಬಿಡುವ ತನಕ ಕುದಿಸಿರಿ. (ಸೌಟಿನಿಂದ ತಿರುಗಿಸಿ). ಎಲ್ಲಾ ಮಿಶ್ರಣ ಗಟ್ಟಿಯಾದ ಬಳಿಕ ಕೆಳಗಿಳಿಸಿರಿ. ಬಳಿಕ ಗಟ್ಟಿಯಾದ ಮಿಶ್ರಣವನ್ನು ಮೂರು ಭಾಗ ಮಾಡಿ ಒಂದು ಸಣ್ಣ ಬೌಲ್‍ಗೆ ಹಾಕಿರಿ.
ಒಂದು ಭಾಗಕ್ಕೆ ಹಾಲಿನೊಂದಿಗೆ ಸೇರಿಸಿದ ಕೇಸರಿ ಸೇರಿಸಿ ಮಿಕ್ಸ್ ಮಾಡಿ – ಕೇಸರಿ ಬಣ್ಣವಾಗುತ್ತದೆ. ಇನ್ನೊಂದು ಭಾಗಕ್ಕೆ ಸಿಪ್ಪೆ ತೆಗೆದು ಬೇಯಿಸಿ ರುಬ್ಬಿದ ಪಿಸ್ತಾವನ್ನು ಮಿಕ್ಸ್ ಮಾಡಿ – ಹಸಿರು ಬಣ್ಣವಾಗುತ್ತದೆ. ಇನ್ನೊಂದು ಭಾಗಕ್ಕೆ ಬಿಳಿ ಕೊಬ್ಬರಿ ತುರಿಯ ಪೇಸ್ಟ್ ಅನ್ನು ಮಿಕ್ಸ್ ಮಾಡಿ – ಬಿಳಿ ಬಣ್ಣವಾಗುತ್ತದೆ. ಈಗ ಒಂದು ತಟ್ಟೆಗೆ ತುಪ್ಪ ಸವರಿ. ಕೇಸರಿ, ಬಿಳಿ, ಹಸಿರು ಬಣ್ಣದ ಮಿಶ್ರಣವನ್ನು ಒಂದರ ಮೇಲೊಂದರಂತೆ ಹಾಕಿ. ಬೇಕಾದ ಆಕೃತಿಗೆ ಕಟ್ ಮಾಡಿ. ತಣ್ಣಗಾದ ಮೇಲೆ ತಟ್ಟೆಯಿಂದ ತೆಗೆದು ಸೇವಿಸಿರಿ.