* ಅಜವಾನ 1 ಟೀ ಚಮಚ
ತಯಾರಿಸುವ ವಿಧಾನ:
ಮೊದಲು ಅಕ್ಕಿಯನ್ನು 2 ರಿಂದ 3 ದಿನ ಬಿಸಿಲಿನಲ್ಲಿ ಒಣಗಿಸಬೇಕು ಅಂದರೆ ಪ್ರತಿದಿನ ಅಕ್ಕಿಯನ್ನು ತೊಳೆದು ನೀರನ್ನು ಬದಲಾಯಿಸಬೇಕು. ಮೂರನೇ ದಿನ ಅಕ್ಕಿಯನ್ನು ನೀರು ಹಾಕಿ ರುಬ್ಬಬೇಕು. ನಂತರ ರುಬ್ಬಿದ ಮೇಲೆ ದಪ್ಪ ತಳದ ದೊಡ್ಡ ಪಾತ್ರೆಗೆ ರುಬ್ಬಿದ ಅಕ್ಕಿ ಮತ್ತು 4 ಲೀಟರ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕುದಿಯಲು ಇಡಬೇಕು. ಆದರೆ ಅದರಲ್ಲಿ ಗಂಟುಗಳಾಗದಂತೆ ಸೌಟನ್ನು ಹಾಕಿ ತಿರುಗಿಸುತ್ತಾ ಇರಬೇಕು.
ನಂತರ ಮಿಕ್ಸಿ ಮಾಡಿದ ಇಂಗು ಮತ್ತು ಜೀರಿಗೆ ಅಜವಾನವನ್ನು ಹಾಕಿ ಗಂಟುಗಳಾಗದಂತೆ ತಿರುಗಿಸಬೇಕು. ನಂತರ ಅದರ ಮೇಲೆ ಮುಚ್ಚಳವನ್ನು ಮುಚ್ಚಿ ಸ್ವಲ್ಪ ಹೊತ್ತು ಬಿಡಬೇಕು. ನಂಚರ ಪ್ಲಾಸ್ಟಿಕ್ ಹಾಳೆಯನ್ನು ತೆಗೆದುಕೊಂಡು ಅದರ ಮೇಲೆ ಸಂಡಿಗೆಯನ್ನು ಹಾಕಿ ಅದನ್ನು ಬಿಸಿಲಿಗೆ ಒಣಗಿಸಬೇಕು. ಅದು ಗರಿಗರಿಯಾಗಿ ಒಣಗಿದ ಮೇಲೆ ಎಣ್ಣೆಯಲ್ಲಿ ಕರಿದರೆ ರುಚಿಯಾದ ಗರಿಗಿಯಾದ ಅಕ್ಕಿ ಸಂಡಿಗೆ ಸವಿಯಲು ಸಿದ್ಧವಾಗಿರುತ್ತದೆ.