ಅಡುಗೆ ಮನೆಯ ಸಿಂಕ್ ಥಳ ಥಳ ಹೊಳೆಯಲು ಹೀಗೆ ಮಾಡಿ

ಶುಕ್ರವಾರ, 19 ಮೇ 2017 (09:50 IST)
ಬೆಂಗಳೂರು: ನಿಮ್ಮ ಅಡುಗೆ ಮನೆಯಲ್ಲಿ ಹೆಚ್ಚು ಕೊಳೆಯಾಗುವ ಭಾಗವೆಂದರೆ ಸಿಂಕ್. ಇದನ್ನು ಶುಚಿಯಾಗಿಟ್ಟುಕೊಳ್ಳಲು ಇಲ್ಲಿದೆ ಕೆಲವು ಉಪಾಯಗಳು.

 
·         ಬೇಕಿಂಗ್ ಸೋಡಾ ಮತ್ತು ಟೂತ್ ಪೇಸ್ಟ್ ನ ಮಿಶ್ರಣದ ದ್ರಾವಣ ಮಾಡಿ ತೊಳೆಯಿರಿ.
·         ನಿಂಬೆ ಹಣ್ಣಿನ ರಸವನ್ನು ಸಿಂಕ್ ಗೆ ಹಾಕಿ 15 ನಿಮಿಷ ಬಿಡಿ. ನಂತರ ಸ್ಕ್ರಬರ್ ಬಳಸಿಕೊಂಡು ಚೆನ್ನಾಗಿ ಒರೆಸಿ. ಇದಾದ ಮೇಲೆ ನೀರು ಹಾಕಿ ತೊಳೆದುಕೊಳ್ಳಿ.
·         ಪೇಪರ್ ಟವೆಲ್ ನ್ನು ವಿನೇಗರ್ ನಲ್ಲಿ ಅದ್ದಿ ಸಿಂಕ್ ನ ಮೂಲೆ ಮೂಲೆಗೆ ಇಡಿ. ನಂತರ ಚೆನ್ನಾಗಿ ಉಜ್ಜಿ ತೊಳೆದುಕೊಳ್ಳಿ.
·         ಸ್ವಲ್ಪ ಉಪ್ಪು, ಬೇಕಿಂಗ್ ಸೋಡಾ ಮಿಶ್ರಣ ಮಾಡಿ ಸಿಂಕ್ ತೊಳೆಯಿರಿ.
·         ಒಣಗಿದ ಸಿಂಕ್ ಗೆ ಅಕ್ಕಿ ಹಿಟ್ಟು ಚೆಲ್ಲಿಕೊಂಡು ಅದನ್ನು ಪೇಪರ್ ಅಥವಾ ಸ್ಕ್ರಬರ್ ಬಳಸಿ ಒರೆಸಿ. ನಂತರ ನೀರು ಬಳಸಿ ತೊಳೆದುಕೊಳ್ಳಿ.

ಇಷ್ಟು ಮಾಡಿದರೆ ಸಾಕು. ಹೊಳೆಯುವ ಸಿಂಕ್ ನಿಮ್ಮದಾಗುತ್ತದೆ ಅಲ್ಲದೆ ಅಡುಗೆ ಮನೆಯಲ್ಲಿ ವಾಸನೆ ಹೋಗಿ ಸುವಾಸನೆಯಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ