ಉಪಯೋಗಿಸಿ ಬಿಸಾಡುವ ನಿಂಬೆ ಹಣ್ಣಿನ ಉಪಯೋಗಗಳು

ಶನಿವಾರ, 10 ಜೂನ್ 2017 (09:18 IST)
ಬೆಂಗಳೂರು: ಅಡುಗೆ ಮಾಡುವಾಗ ರಸ ಹಿಂಡಿದ ಮೇಲೆ ಉಳಿಯುವ ನಿಂಬೆ ಹಣ್ಣಿನ್ನು ಸುಮ್ಮನೇ ಕಸದ ಬುಟ್ಟಿಗೆ ಹಾಕಬೇಕಿಲ್ಲ. ರಸ ಹಿಂಡಿದರೂ ನಿಂಬೆ ಹಣ್ಣಿನ ಉಪಯೋಗ ಹಲವಾರು ಇದೆ.

 
ಜಿಡ್ಡಿನ ಪಾತ್ರೆಗೆ
ಜಿಡ್ಡಿನ ಪಾತ್ರೆ ಎಷ್ಟು ಸಾಬೂನು ಹಾಕಿದರೂ ಅದು ಹೋಗಲ್ಲ. ಅದಕ್ಕೆ ರಸ ಹಿಂಡಿ ಬಾಕಿಯಾದ ನಿಂಬೆ ಹಣ್ಣಿನ ತುಂಡು ಬಳಸಿ ಜಿಡ್ಡು ಇರುವ ಪಾತ್ರೆಗೆ ಚೆನ್ನಾಗಿ ಉಜ್ಜಿ. ಇದರಿಂದ ಕೊಳೆಯೂ ಹೋಗುತ್ತದೆ.

ಶೂ ಪಾಲಿಶ್
ಆಫೀಸ್ ಗೆ ಹೋಗುವ ವೇಳೆಗೆ ಶೂ ಪಾಲಿಶ್ ಆಗಿಲ್ಲ. ಪಾಲಿಶ್ ಖಾಲಿಯಾಗಿದೆ ಎಂದಾದರೆ ಉಳಿದ ನಿಂಬೆ ಹಣ್ಣಿನ ತುಂಡು ಬಳಸಿ ಶೂ ಉಜ್ಜಿಕೊಂಡರೆ ಶೈನಿಂಗ್ ಬರುತ್ತದೆ.

ಬಟ್ಟೆಗಳ ಕೊಳೆ ತೆಗೆಯಲು
ಬಿಳಿ ಬಟ್ಟೆ ವಿಪರೀತ ಕೊಳೆಯಾಗಿದ್ದರೆ, ವಾಶಿಂಗ್ ಪೌಡರ್ ಜತೆಗೆ ನಿಂಬೆ ಹಣ್ಣಿನ ತುಂಡು ಹಾಕಿ ನೀರಿನಲ್ಲಿ ಬಟ್ಟೆ ನೆನೆಸಿಡಿ. ಇದರಿಂದ ಬಟ್ಟೆ ಬಿಳಿ ಬಣ್ಣಕ್ಕೆ ಮರಳುತ್ತದೆ.

ಕೈ ಎಣ್ಣೆಯಾಗಿದ್ದರೆ
ಎಣ್ಣೆ ಪದಾರ್ಥ ಸೇವಿಸಿದ್ದರೆ ಅಥವಾ ಅಡುಗೆ ಮಾಡಿದ ಮೇಲೆ ಕೈಗೆ ಎಣ್ಣೆ ಅಂಟಿಕೊಂಡಿದ್ದರೆ, ನಿಂಬೆ ಹಣ್ಣಿನ ತುಂಡಿನಿಂದ ಕೈ ಉಜ್ಜಿಕೊಂಡು ತೊಳೆದರೆ ಜಿಡ್ಡು ಮಾಯವಾಗುತ್ತದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ