ಸ್ಪೆಷಲ್ ರೆಸಿಪಿ ವೆಜ್ ಸ್ಪ್ರಿಂಗ್ ರೋಲ್

ಗುರುವಾರ, 13 ಜುಲೈ 2017 (18:49 IST)
ಯಾವಾಗ್ಲೂ ಒಂದೇ ಥರಹದ ತಿಂಡಿ ತಿಂದು ಬೇಜಾರಾಗುತ್ತೆ. ಏನಾದ್ರೂ ಸ್ಪೆಷಲ್ ಆಗಿ ಟ್ರೈ ಮಾಡೋಣ ಅನ್ಸತ್ತೆ. ಅದ್ರಲ್ಲೂ ಮಳೆಗಾಲದಲ್ಲಿ ಸ್ಪೆಷಲ್ ಸ್ನ್ಯಾಕ್ಸ್ ಇದ್ರೆ ಅದೂ ಮನೆಯಲ್ಲೇ ರೆಡಿ ಮಾಡಿಕೊಂಡು ಸವಿದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ.. ಅದಕ್ಕಾಗಿ ಇಲ್ಲಿದೆ ಕ್ವಿಕ್ ಆಗಿ ಮಾಡಬಹುದಾದ ವೆಜ್ ಸ್ಪ್ರಿಂಗ್ ರೋಲ್ ರೆಸಿಪಿ.

ಬೇಕಾಗುವ ಸಾಮಾಗ್ರಿಗಳು:
 
* ಗೋಧಿ ಹಿಟ್ಟು -2 ಕಪ್ 
* ಮೈದಾ 1/2 ಕಪ್ 
* ತರಕಾರಿಗಳು- ಕ್ಯಾರೆಟ್, ಕ್ಯಾಪ್ಸಿಕಂ, ಬೀನ್ಸ್, ಈರುಳ್ಳಿ - 1 ಕಪ್ 
 
* ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು 
* ಅರಿಶಿಣ ಪುಡಿ - 1 ಚಿಟಿಕೆ
* ಚಾಟ್ ಮಸಾಲ - 1 ಚಮಚ 
* ಎಣ್ಣೆ 1 ಚಮಚ 
* ನೀರು 1 ಕಪ್ 
* ನಿಂಬೆ ರಸ 1 ಚಮಚ 
 
ಮಾಡುವ ವಿಧಾನ: 
 
* ಗೋಧಿ ಹಾಗೂ ಮೈದಾವನ್ನು ಮಿಕ್ಸ್ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲೆಸಿ. 
ಈಗ ತರಕಾರಿಗಳನ್ನು ಬೇಯಲು ಇಡಿ. 
 
* ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಬೇಯಿಸಿದ ಎಲ್ಲಾ ತರಕಾರಿಗಳನ್ನು ಹಾಕಿ 2-3 ನಿಮಿಷ ಹುರಿಯಿರಿ. 
* ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಪುಡಿ, ಚಾಟ್ ಮಸಾಲ, ನಿಂಬೆ ರಸ, ರುಚಿಗೆ ತಕ್ಕ ಉಪ್ಪು ಹಾಕಿ 5 ನಿಮಿಷ ಫ್ರೈ ಮಾಡಿ,  ನಂತರ ಉರಿಯಿಂದ ಇಳಿಸಿ ಇಡಿ. 
 
* ಈಗ ಕಲೆಸಿದ ಹಿಟ್ಟಿನಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ತಯಾರಿಸಿ ಚಪಾತಿ ರೀತಿಯಲ್ಲಿ ಲಟ್ಟಿಸಿ ತವಾಕ್ಕೆ ಹಾಕಿ ಎರಡೂ ಬದಿ ಬೇಯಿಸಿ, ನಂತರ ಚಪಾತಿ ಮಧ್ಯಕ್ಕೆ ಮಸಾಲೆ ಮಿಕ್ಸ್ ಮಾಡಿದ ತರಕಾರಿ ಹಾಕಿ ರೋಲ್ ಮಾಡಿ  ಸರ್ವ ಮಾಡಿ ವೆಜ್ ಸ್ಪ್ರಿಂಗ್ ರೋಲ್ ಸವಿಯಲು ಸಿದ್ಧ.
 

ವೆಬ್ದುನಿಯಾವನ್ನು ಓದಿ