ಕಲ್ಲಂಗಡಿ ಸಿಪ್ಪೆ ಬಿಸಾಕದೆ ಪಲ್ಯ ಮಾಡಿ

ಬುಧವಾರ, 11 ಜನವರಿ 2017 (09:27 IST)
ಬೆಂಗಳೂರು: ಕಲ್ಲಂಗಡಿ ಹಣ್ಣು ತಿಂದ ಮೇಲೆ ಸಿಪ್ಪೆ ಕಸದ ಬುಟ್ಟಿ ಸೇರುತ್ತದೆ. ಆದರೆ ಹಾಗೆ ಮಾಡಬೇಡಿ. ಪಲ್ಯ ಮಾಡಿ ತಿನ್ನಿ. ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು

ಕಲ್ಲಂಗಡಿ ಸಿಪ್ಪೆ
ಹಸಿಮೆಣಸು
ಖಾರದ ಪುಡಿ
ಅರಸಿನ ಪುಡಿ
ಬೆಲ್ಲ
ಉಪ್ಪು
ಒಗ್ಗರಣೆ ಸಾಮಾನು

ಮಾಡುವ ವಿಧಾನ

ಕಲ್ಲಂಗಡಿ ಸಿಪ್ಪೆಯ ಮೇಲಿನ ಹಸಿರು ಭಾಗವನ್ನು ಕೆತ್ತಿ ತೆಗೆಯಿರಿ. ಬಿಳಿ ಭಾಗವನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆ ಹಾಕಿಕೊಂಡು, ಹಸಿಮೆಣಸು, ಖಾರದಪುಡಿ, ಅರಸಿನ ಪುಡಿ, ಉಪ್ಪು ಬೆಲ್ಲ ಹಾಗೂ ಕಲ್ಲಂಗಡಿ ಸಿಪ್ಪೆಯ ಹೋಳುಗಳನ್ನು ಹಾಕಿ ಚೆನ್ನಾಗಿ ಬೇಯಿಸಿ. ನೀರು ಪೂರ್ತಿ ಆರಿದ ಮೇಲೆ ಉರಿ ನಿಲ್ಲಿಸಿ. ಈಗ ಕಲ್ಲಂಗಡಿ ಸಿಪ್ಪೆಯ ಪಲ್ಯ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ