ನೀವೇ ಒಮ್ಮೆ ಟ್ರೈ ಮಾಡಿ ನೋಡಿ ಧಾರವಾಡ ಪೇಡಾ

ಸೋಮವಾರ, 8 ಅಕ್ಟೋಬರ್ 2018 (15:27 IST)
ಧಾರವಾಡ ಪೇಡಾ ಅಂದರೆ ಬಾಯಿ ನೀರೂರುತ್ತದೆ ಅಲ್ಲವೇ.. ಅದರ ರುಚಿಯಿಂದಲೇ ಅದು ಪ್ರಸಿದ್ಧತೆಯನ್ನು ಹೊಂದಿದೆ. ಈ ಪೇಡಾವನ್ನು ಧಾರವಾಡದಿಂದಲೇ ಕೊಂಡು ತಂದು ತಿನ್ನಬೇಕಿಲ್ಲ. ನಾವೇ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ಹೇಗೆ ಅಂತಾ ಕೇಳ್ತೀರಾ... ಒಮ್ಮೆ ಟ್ರೈ ಮಾಡಿ ರುಚಿ ಸವಿಯಿರಿ..
ಬೇಕಾಗುವ ಸಾಮಗ್ರಿಗಳು :
1 ಲೀಟರ್ ಹಾಲು
3 ಚಮಚ ಸಕ್ಕರೆ
3 ಚಮಚ ತುಪ್ಪ
ಏಲಕ್ಕಿ ಪುಡಿ
ಸಕ್ಕರೆ ಪುಡಿ
 
ತಯಾರಿಸುವ ವಿಧಾನ :
  ಮೊದಲು ಹಾಲನ್ನು ಕಾಯಿಸಿ ಅದಕ್ಕೆ ನಿಂಬೆ ಹಣ್ಣು ರಸ ಹಿಂಡಿ ಹಾಲು ಒಡೆದು ಹಾಳಾಗುವಂತೆ ಮಾಡಬೇಕು. ನಂತರ ಅದರ ನೀರನ್ನು ತೆಗೆಯಲು ಒಂದು ತೆಳುವಾದ ಮಸ್ಲಿನ್ ಬಟ್ಟೆಯಲ್ಲಿ ಕಟ್ಟಿ ಹಿಂಡಿ ನೀರನ್ನು ತೆಗೆಯಬೇಕು. ನಂತರ ಈ ಪನೀರನ್ನು ಒಂದು ಬಾಣಲೆಗೆ ಹಾಕಿ ಬಿಸಿ ಮಾಡಿ ಸಣ್ಣ ಉರಿಯಲ್ಲಿ ಇಟ್ಟು ಅದಕ್ಕೆ 2 ಚಮಚ ಸಕ್ಕರೆ, 1 ಚಮಚ ತುಪ್ಪವನ್ನು ಹಾಕಿ ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಅದು ತಳ ಹಿಡಿದಾಗ ಹಾಲು ಮತ್ತು ತುಪ್ಪ ಹಾಕಿ ಚೆನ್ನಾಗಿ ತಿರುವಬೇಕು. ಸಕ್ಕರೆ, ತುಪ್ಪ ಮತ್ತು ಹಾಲು ಹಾಕಿ ಚೆನ್ನಾಗಿ ಗಟ್ಟಿಯಾಗುವವರೆಗೂ ಮತ್ತು ಕಂದು ಬಣ್ಣ ಬರುವವರೆಗೂ ತಿರುವಿ ಒಲೆಯನ್ನು ಆರಿಸಬೇಕು. ನಂತರ ಏಲಕ್ಕಿ ಪುಡಿಯನ್ನು ತಿರುವಿ ಇಟ್ಟ ಪೇಡಾ ಮಿಶ್ರಣಕ್ಕೆ ಹಾಕಿ ಅದನ್ನು ಉದ್ದ ಆಕಾರಕ್ಕೆ ಅಥವಾ ದುಂಡಾಗಿ ಪೇಡಾವನ್ನು ಮಾಡಿ ಸಕ್ಕರೆ ಪುಡಿಯಲ್ಲಿ ಹೊರಳಾಡಿಸಿ ಒಂದೊಂದನ್ನೇ ತೆಗೆದರೆ ರುಚಿರುಚಿಯಾದ ಧಾರವಾಡ ಪೇಡಾ ಸವಿಯಲು ಸಿದ್ಧ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ