ಕರಾವಳಿ ಶೈಲಿಯ ಬಾಂಗಡಾ ಫ್ರೈ

ಗುರುವಾರ, 4 ಅಕ್ಟೋಬರ್ 2018 (13:47 IST)
ಕರಾವಳಿಯಲ್ಲಿ ಸಿಗುವ ಮೀನುಗಳ ರುಚಿ ತಿಂದವರಿಗಷ್ಟೇ ಗೊತ್ತು ಅದರಲ್ಲೂ ಈ ಭಾಗದಲ್ಲಿ ಕಂಡುಬರುವ ಮೀನುಗಳಲ್ಲಿ ಬಂಗಡೆ ತುಂಬಾ ರುಚಿಕರ ಎಂದೇ ಹೇಳಬಹುದು ಇದನ್ನು ಹಲವರು ವಿವಿಧ ರೀತಿಯಲ್ಲಿ ಫ್ರೈ ಮಾಡಿ ತಿನ್ನುತ್ತಾರೆ ಆದರೆ ಕರಾವಳಿಯಲ್ಲಿ ಶೈಲಿಯಲ್ಲಿ ಫ್ರೈ ಮಾಡಿ ತಿನ್ನಬೇಕು ಎಂದು ನಿಮಗೆ ಬಯಕೆ ಉಂಟಾದರೆ ಇಲ್ಲಿದೆ ವಿವರ.
ಬೇಕಾಗುವ ಪದಾರ್ಥಗಳು - 
ಬಂಗಡೆ ಮೀನು 5
ಕೆಂಪುಮೆಣಸು 7-8
ರವೆ 1/2 ಕಪ್
ಅರಿಶಿನ ಅರ್ಧ ಚಮಚ
ಶುಂಟಿ ಬೆಳ್ಳುಳ್ಳಿ ಪೇಸ್ಟ್
ನಿಂಬೆ ರಸ 2 ಟೀ ಸ್ಪೂನ್
ಎಣ್ಣೆ
ಉಪ್ಪು
 
ಮಾಡುವ ವಿಧಾನ
 
ಮೊದಲು ಒಂದು ಪಾತ್ರೆಯನ್ನು ತೆಗೆದುಕೊಳ್ಳಿ ಅದರಲ್ಲಿ ಕತ್ತರಿಸಿದ ಮೀನನ್ನು ಹಾಕಿ ಅದಕ್ಕೆ ಅರಿಶಿನ, ನಿಂಬೆರಸ ಮತ್ತು ಶುಂಟಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಕಲೆಸಿ 5 ರಿಂದ 10 ನಿಮಿಷಗಳ ಕಾಲ ಮಚ್ಚಿಡಿ ನಂತರ ಕೆಂಪು ಮೆಣಸು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ 20 ನಿಮಿಷಗಳ ನಂತರ ಮೀನನ್ನು ತೆಗೆದುಕೊಂಡು ಅದಕ್ಕೆ ಈ ಮೆಣಸಿನ ಪೇಸ್ಟ್ ಅನ್ನು ಹಾಕಿ ಮತ್ತೆ 5 ನಿಮಿಷ ಹಾಗೆಯೇ ಬಿಡಿ.
 
ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಅದರ ಸುತ್ತಲೂ ಎಣ್ಣೆಯನ್ನು ಸವರಿ. ನಂತರ ಒಂದು ಪ್ಲೇಟ್ ಅನ್ನು ತೆಗೆದುಕೊಳ್ಳಿ ಅದರಲ್ಲಿ ರವಾವನ್ನು ಹಾಕಿಕೊಳ್ಳಿ ನಂತರ ಮೆಣಸಿನಿಂದ ಮೆತಿರುವ ಮೀನನ್ನು ತೆಗೆದುಕೊಂಡು ರವಾದ ಮೇಲೆ ಹೊರಳಿಸಿ ರವಾ ಪೂರ್ತಿಯಾಗಿ ಮೀನಿಗೆ ತಾಗಿದೆ ಎಂದು ಖಚಿತಪಡಿಸಿಕೊಂಡು ಅದನ್ನು ಬಾಣಲೆಯ ಮೇಲೆ ಹಾಕಿ ಮಧ್ಯಮ ಉರಿಯಲ್ಲಿ ಎರಡು ಕಡೆ ಚೆನ್ನಾಗಿ ಹುರಿದರೆ ರುಚಿಕರವಾದ ಬಾಂಗಡಾ ಫ್ರೈ ತಿನ್ನಲು ಸಿದ್ಧ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ