ಯುಎಸ್ ಓಪನ್ : ಪೇಸ್-ಲೂಕಾಸ್ ಕ್ವಾರ್ಟರ್‌ಫೈನಲ್‍ಗೆ

ಸೋಮವಾರ, 1 ಸೆಪ್ಟಂಬರ್ 2008 (13:05 IST)
ಯುಎಸ್ ಓಪನ್ ಪಂದ್ಯಾವಳಿಯ ಏಳನೇ ಶ್ರೇಯಾಕಿಂತ ಜೋಡಿಯಾದ ಲಿಯಾಂಡರ್ ಪೇಸ್ ಮತ್ತು ಲೂಕಾಸ್ ಡ್ಲೌಹಿ ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್ ಪ್ರವೇಶಿಸುವಲ್ಲಿ ಮೊದಲಿಗರಾಗಿದ್ದಾರೆ.

ಪೇಸ್ ಮತ್ತು ಲೂಕಾಸ್ ಡ್ಲೌಹಿ ಜೋಡಿ ಎದುರಾಳಿಗಳಾದ ದಕ್ಷಿಣ ಆಫ್ರಿಕಾದ ರಿಕ್‌ ಡೆ ವೊಯಿಸ್ಟ್ ಮತ್ತು ಆಶ್ಲೇ ಫಿಶರ್ ಜೋಡಿಯನ್ನು 6-3, 6-3 ನೇರ ಸೆಟ್‌ಗಳಿಂದ ಸೋಲಿಸಿ ಮುನ್ನಡೆ ಪಡೆದರು.

ರಿಕ್‌ ಡೆ ವೊಯಿಸ್ಟ್ ಮತ್ತು ಆಶ್ಲೇ ಫಿಶರ್ ಅವರಿಗೆ ಹೋಲಿಸಿದಲ್ಲಿ ಏಳು ತಪ್ಪುಗಳನ್ನು ಎಸೆಗಿದ ಇಂಡೋ-ಜೆಕ್ ಜೋಡಿ ಸುಲಭ ಜಯವನ್ನು ಸಾಧಿಸಿತು.

ಲಿಯಾಂಡರ್ ಪೇಸ್ ಮತ್ತು ಲೂಕಾಸ್ ಡ್ಲೌಹಿ ಜೋಡಿ ಎದುರಾಳಿಗಳಾದ ರಿಕ್‌ ಡೆ ವೊಯಿಸ್ಟ್ ಮತ್ತು ಆಶ್ಲೇ ಫಿಶರ್ ವಿರುದ್ಧ 69 ನಿಮಿಷಗಳ ಪಂದ್ಯದ ಅವಧಿಯಲ್ಲಿ ಪೇಸ್ ಮತ್ತು ಲೂಕಾಸ್ ಡ್ಲೌಹಿ ಉತ್ತಮ ಸರ್ವ್‌ಗಳ ಮೂಲಕ ಎದುರಾಳಿ ಜೋಡಿಯನ್ನು ಕಂಗೆಡಿಸಿದರು.

ವೆಬ್ದುನಿಯಾವನ್ನು ಓದಿ