ಹೆನಿನ್ ಗೆಲುವಿನ ಸರಣಿಗೆ ಶರಪೋವಾ ಬ್ರೇಕ್

ಬುಧವಾರ, 23 ಜನವರಿ 2008 (12:51 IST)
ಅಗ್ರ ಸ್ಥಾನದಲ್ಲಿರುವ ಜಸ್ಟಿನ್ ಹೆನಿನ್ ಅವರ ಸತತ 32ನೇ ಗೆಲುವಿನ ಓಟಕ್ಕೆ ಅಡ್ಡಿ ಮಾಡಿದ ಶರಪೋವಾ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಸೆಮಿ ಫೈನಲ್ ತಲುಪಿದ್ದಾರೆ.

ಮಂಗಳವಾರ ನಡೆದ ಕ್ವಾರ್ಟರ್ ಫೈನಲ್‌ನ ಮೊದಲು ಸತತವಾಗಿ 31 ಪಂದ್ಯಗಳನ್ನು ಗೆದ್ದು ಗೆಲುವಿನ ಅಭಿಯಾನವನ್ನೇ ಆಚರಿಸಿಕೊಂಡಿದ್ದ, ಬೆಲ್ಜಿಯಂನ ಹೆನಿನ್ ಅವರಿಗೆ 5 ನೇ ಶ್ರೇಯಾಂಕಿತರಾಗಿರುವ ರಶ್ಯಾದ ಮರಿಯಾ ಶರಪೋವಾ ತಡೆ ಉಂಟು ಮಾಡಿದರು.


ಈ ಪಂದ್ಯದಲ್ಲಿ ಸಣ್ಣ ಪ್ರತಿರೋಧವೂ ತೋರದ ಹೆನಿನ್, ಶರಪೋವಾ ಎದುರು 6-4, 6 -0 ಅಂತರದಿಂದ ಶರಣಾದರು. ಈ ಗೆಲುವಿನ ಮೂಲಕ ಶರಪೋವಾ ಆಸ್ಟ್ರೇಲಿಯ ಓಪನ್ ಪಂದ್ಯಾವಳಿಯ ಸೆಮಿ ಫೈನಲ್ ತಲುಪಿದ್ದಾರೆ. ಅವರು, ಮತ್ತೊಂದು ಗುಂಪಿನಲ್ಲಿ ಏಳುಬಾರಿಯ ಪ್ರಶಸ್ತಿ ವಿಜೇತೆ ಅಮೆರಿಕಾದ ಸೆರೆನಾ ವಿಲಿಯಮ್ಸ್‌‌ರನ್ನು ಸೋಲಿಸಿರುವ ಜೆಲೆನಾ ಜಾಕೋವಿಕ್ ಅವರನ್ನು ಎದುರಿಸಬೇಕಾಗಿದೆ.

'ಇದು ವಿಸ್ಮಯಕಾರಿ. ನಾನೀವತ್ತು ಗುಳ್ಳೆ ಮೇಲೆ ಇದ್ದೇನೆ ಎಂದು ಅನಿಸುತ್ತಿದೆ' ಎಂದು ಹೆನಿನ್‌ರನ್ನು ಸೋಲಿಸಿದ ಶರಪೋವಾ, ಗೆಲುವಿನ ಕುರಿತು ಪ್ರತಿಕ್ರಿಯೆ ನೀಡಿದರು.

ವೆಬ್ದುನಿಯಾವನ್ನು ಓದಿ