ಬಾಕ್ಸರ್ ಮೇರಿ ಕೋಮ್ ದಾಂಪತ್ಯದಲ್ಲಿ ಬಿರುಕು, ಸುದೀರ್ಘ ದಾಂಪತ್ಯಕ್ಕೆ ಮುಳುವಾಯಿತೆ ರಾಜಕೀಯ ಬದುಕು

Sampriya

ಬುಧವಾರ, 9 ಏಪ್ರಿಲ್ 2025 (19:09 IST)
Photo Courtesy X
ನವದೆಹಲಿ:  ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಮೇರಿ ಕೋಮ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

2005ರಂದು ಒನ್ಲರ್ ಕರುಂಗ್ ಅವರನ್ನು ವಿವಾಹವಾದ ಮೇರಿ ಕೋಮ್ ಅವರು ಸುದೀರ್ಘವಾದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲಿದ್ದಾರೆ ಎನ್ನಲಾಗಿದೆ. ಈ ಜೋಡಿ ಈಗಾಗಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳದುಬಂದಿದೆ.

2022 ರ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಮೇರಿಯ ಪತಿ ಓಂಲರ್ ಸೋಲಿನ ನಂತರ ದಾಂಪತ್ಯದಲ್ಲಿ ಬಿರುಕು ಉಂಟಾಯಿತು ಎಂದು ಹೇಳಲಾಗುತ್ತಿದೆ. ಪ್ರಚಾರದ ಸಮಯದಲ್ಲಿ ದಂಪತಿಗಳು 2-3 ಕೋಟಿ ರೂ. ಖರ್ಚು ಮಾಡಿದ್ದರು ಎಂದು ವರದಿಯಾಗಿದೆ, ಆದರೆ ಚುನಾವಣೆಯಲ್ಲಿನ ಸೋಲು ಇಬ್ಬರನ್ನು ನುಚ್ಚುನೂರು ಮಾಡಿತು.

ಮೇರಿ ಅವರು ತಮ್ಮ ಮಕ್ಕಳೊಂದಿಗೆ ಫರಿದಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ಆದರೆ ಓನ್ಲರ್ ಕೆಲವು ಕುಟುಂಬ ಸದಸ್ಯರೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.

ಚುನಾವಣೆಗಳ ನಂತರ ಅವರ ನಡುವಿನ ಭಿನ್ನಾಭಿಪ್ರಾಯಗಳು ಉಲ್ಬಣಗೊಂಡವು. ಪ್ರಚಾರದ ಸಮಯದಲ್ಲಿ ಉಂಟಾದ ಸುಮಾರು 2-3 ಕೋಟಿ ರೂಪಾಯಿಗಳ ಆರ್ಥಿಕ ನಷ್ಟ ಮತ್ತು ಅವರು ಸೋತ ಬಗ್ಗೆ ಮೇರಿ ಅತೃಪ್ತರಾಗಿದ್ದರು ಎಂದು ವರದಿಯಾಗಿದೆ.

ಓನ್ಲರ್ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಆಸಕ್ತಿ ಹೊಂದಿರಲಿಲ್ಲ ಆದರೆ ಮೇರಿಯ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡರು ಎಂದು ವರದಿ ಹೇಳಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ