ಲಾಹೋರ್: ಪಾಕಿಸ್ತಾನದ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಭದ್ರತೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಪಾಕ್ ಸರ್ಕಾರ ಒಂದೊಂದು ಪಂದ್ಯಕ್ಕೂ ಸಾವಿರಾರು ಪೊಲೀಸರನ್ನು ನಿಯೋಜಿಸುತ್ತಿದೆ.
ಪಾಕ್‌ನ ಪೊಲೀಸರಿಗೆ ಈ ಭದ್ರತಾ ಕಾರ್ಯವೂ ತಲೆನೋವು ತಂದಿದೆ. ಹೀಗಾಗಿ, ಹಲವು ಪೊಲೀಸರು ಭದ್ರತಾ ಕಾರ್ಯಕ್ಕೆ ಹಿಂದೇಟು ಹಾಕಿದ ಬೆನ್ನಲ್ಲೇ ಪಾಕ್ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭದ್ರತಾ ಕಾರ್ಯವನ್ನು ಮಾಡಲು ನಿರಾಕರಿಸಿದ ನೂರಕ್ಕೂ ಹೆಚ್ಚು ಪೊಲೀಸರನ್ನು ಸೇವೆಯಿಂದಲೇ ವಜಾಗೊಳಿಸಿದೆ. ಪಾಕಿಸ್ತಾನದ ಪಂಬಾಬ್ ಪ್ರಾಂತ್ಯದಲ್ಲಿ ಈ ಬೆಳವಣಿಗೆ ನಡೆಸಿದೆ.
ಕರ್ತವ್ಯದಿಂದ ಬಿಡುಗಡೆಯಾದ ಅಧಿಕಾರಿಗಳು ಹಲವು ಸಂದರ್ಭದಲ್ಲಿ ಗೈರಾಗಿದ್ದರು. ಅಲ್ಲದೇ ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ಭದ್ರತಾ ಕಾರ್ಯ ನಿರ್ವಹಿಸಲು ನಿರಾಕರಿಸಿದ್ದರು.
ಲಾಹೋರ್‌ನ ಗಡಾಫಿ, ಕರಾಚಿ ಹಾಗೂ ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತಿದೆ. ಹಾಗಾಗಿ ಗೊತ್ತುಪಡಿಸಿದ ಹೋಟೆಲ್‌ಗಳಿಗೆ ಪ್ರವಾಣಿಸುವ ತಂಡಗಳಿಗೆ ಭದ್ರತೆ ಒದಗಿಸಲು ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಆದರೆ, ಭದ್ರತೆ ಕಾರ್ಯಕ್ಕೆ ಹಲವು ಪೊಲೀಸರು ಹಿಂದೇಟು ಹಾಕಿದ್ದರು.