ಕ್ಯಾಂಡಿಡೇಟ್ಸ್ ಚೆಸ್ ಗೆದ್ದು ದಾಖಲೆ ಮಾಡಿದ ಭಾರತದ ಡಿ ಗುಕೇಶ್

Krishnaveni K

ಸೋಮವಾರ, 22 ಏಪ್ರಿಲ್ 2024 (12:18 IST)
Photo Courtesy: Twitter
ಚೆನ್ನೈ: ಟೊರೆಂಟೋದಲ್ಲಿ ನಡೆದ ಕ್ಯಾಂಡಿಡೇಟ್ಸ್ ಚೆಸ್ ಚಾಂಪಿಯನ್ ಶಿಪ್ ಗೆದ್ದ ಭಾರತದ ಡಿ ಗುಕೇಶ್ ಈ ಸಾಧನೆ ಮಾಡಿದ ವಿಶ್ವದ ಕಿರಿಯ ಮತ್ತು ಭಾರತದ 2 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದಕ್ಕೆ ಮೊದಲು 2014 ರಲ್ಲಿ ಭಾರತದ ವಿಶ‍್ವನಾಥನ್ ಆನಂದ್ ಈ ಸಾಧನೆ ಮಾಡಿದ್ದರು. ಕ್ಯಾಂಡಿಡೇಟ್ ಚೆಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಮೆರಿಕಾದ ಹಿಕರು ನಕಮುರಾ ವಿರುದ್ಧ ಗುಕೇಶ್ ಕೊನೆಯ ಸುತ್ತಿನಲ್ಲಿ ಡ್ರಾ ಸಾಧಿಸಿದರು. ಒಟ್ಟು 14 ಪಾಯಿಂಟ್ ಪೈಕಿ 9 ತನ್ನದಾಗಿಸಿಕೊಂಡ ಗುಕೇಶ್ ಗೆಲುವು ತನ್ನದಾಗಿಸಿಕೊಂಡರು.

17 ವರ್ಷದ ಗುಕೇಶ್ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಹಾಲಿ ವಿಶ್ವಚಾಂಪಿಯನ್ ಚೀನಾದ ಡಿಂಗ್ ಲಿರೆನ್ ವಿರುದ್ಧ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡಿರುವುದು  ವಿಶೇಷ.

ಒಂದು ವೇಳೆ ಚೀನಾದ ವಿಶ್ವಚಾಂಪಿಯನ್ ಡಿಂಗ್ ಲಿರೆನ್ ವಿರುದ್ಧ ಗೆಲ್ಲಲು ಸಫಲರಾದರೆ ಗುಕೇಶ್ ಮತ್ತೊಂದು ದಾಖಲೆ ಮಾಡಲಿದ್ದಾರೆ. ಗುಕೇಶ್ ಸಾಧನೆಯನ್ನು ತಮಿಳುನಾಡು ಸಿಎಂ ಸ್ಟಾಲಿನ್, ಭಾರತದ ಮಾಜಿ ವಿಶ್ವ ಚಾಂಪಿಯನ್ ವಿಶ‍್ವನಾಥನ್ ಆನಂದ್ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ