ನವದೆಹಲಿ: ಐಪಿಎಲ್ ಪ್ರಾರಂಭವಾಗಿ 17 ವರ್ಷ ಕಳೆದರೂ ಪುರುಷರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿ ಗೆದ್ದಿಲ್ಲ. ಆದರೆ ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿರುವ ಮಹಿಳಾ ಆರ್‌ಸಿಬಿ ತಂಡವು ಕಿರೀಟ ಮುಡಿಗೇರಿಸಿಕೊಳ್ಳುವ ಹೊಸ್ತಿಲ್ಲಲಿದೆ.
ಇಂದು ನವದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಡಬ್ಲ್ಯುಪಿಎಲ್ ಫೈನಲ್ ಸಮರಕ್ಕೆ ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದು, ಆರ್‌ಸಿಬಿ ಅಭಿಮಾನಿಗಳು ಈ ಬಾರಿ 'ಕಫ್ ನಮ್ಮದೇ' ಎನ್ನುತ್ತಿದ್ದಾರೆ.
ಕಳೆದ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಆರ್‌ಸಿಬಿ ಪ್ರಶಸ್ತಿ ಸುತ್ತಿನಲ್ಲಿ ಸೆಣೆಸಲಿದೆ. ಫ್ಲೇ ಆಫ್ ಪಂದ್ಯದಲ್ಲಿ ಬಲಿಷ್ಠ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ರೋಚಕ ಹಣಾಹಣಿಯಲ್ಲಿ ಮಣಿಸಿ ಸ್ಪೃತಿ ಮಂದಾನ ನೇತೃತ್ವದ ಆರ್‌ಸಿಬಿ ತಂಡ ಫೈನಲ್‌ಗೆ ಲಗ್ಗೆ ಹಾಕಿತ್ತು.
ಪ್ರಶಸ್ತಿ ಗೆಲ್ಲುವ ತಂಡವೂ ಒಂದು ಕೋಟಿ ಮೊತ್ತ ಹಾಗೂ ಆಕರ್ಷಕ ಟ್ರೋಫಿಯನ್ನು ಹಾಗೂ ರನ್ನರ್ಸ್ ಆಫ್ ತಂಡವು 50 ಲಕ್ಷ ಮೊತ್ತದ ಬಹುಮಾನವನ್ನು ಪಡೆಯಲಿದೆ.
ಆರ್‌ಸಿಬಿ ಫೈನಲ್ ಪ್ರವೇಶಿಸಿದ ಖುಷಿಯಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದು, ಟ್ರೋಫಿಯನ್ನು ಗೆದ್ದು ಬನ್ನಿ ಎಂದು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸುತ್ತಿದ್ದಾರೆ.