ಮನುಷತ್ವ ಮರೆತ ದಿಲ್ಲಿ ಆಟಗಾರರು; ನೋವಿನಲ್ಲಿ ನರಳುತ್ತಿರುವಾಗಲೂ ಸಹಾಯ ಹಸ್ತ ಚಾಚದವರಾದರು! (ವಿಡಿಯೋ ನೋಡಿ)

ಬುಧವಾರ, 3 ಜನವರಿ 2018 (10:36 IST)
ಇಂದೋರ್ : ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ದೆಹಲಿ ತಂಡದ ಆಟಗಾರರು ಮನುಷ್ಯತ್ವವೇ ಇಲ್ಲದವರಂತೆ ವರ್ತಿಸಿದ ಘಟನೆ ನಡೆದಿತ್ತು.


ಈ ಪಂದ್ಯದಲ್ಲಿ ದೆಹಲಿ ತಂಡವು ವಿದರ್ಭ ತಂಡದ ಜೊತೆ ಆಟವಾಡುತ್ತಿದ್ದಾಗ ವಿದರ್ಭ ತಂಡದ ಬ್ಯಾಟ್ಸ್ ಮನ್ ಬೌನ್ಸರ್ ತಾಗಿ ಕೆಳಗೆ ಬಿದ್ದು ನೋವಿನಿಂದ ನರಳುತ್ತಿರುವಾಗ ಪಕ್ಕದಲ್ಲೇ ಇದ್ದ ದಿಲ್ಲಿ ಆಟಗಾರರು  ಬ್ಯಾಟ್ಸ್ ಮನ್ ಹತ್ತಿರವು ಸುಳಿಯದೆ ತಮ್ಮಪಾಡಿಗೆ ತಾವಿದ್ದು ಮನುಷ್ಯತ್ವಕ್ಕೆ ವಿರುದ್ಧವಾಗಿ ವರ್ತಿಸಿದರು. ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ನಲ್ಲಿ ‘ಬ್ಲೀಡ್ ಧೋನಿಸಂ’ ಎಂಬ ಹೆಸರಿನಲ್ಲಿ ಹಾಕಿದ್ದು, ಇದು ಈಗ ವೈರಲ್ ಆಗಿದೆ.



ವಿದರ್ಭ ತಂಡದ ಬ್ಯಾಟ್ಸ್ ಮನ್ ಬೌನ್ಸರ್ ತಾಗಿ ಕೆಳಗೆ ಬಿದ್ದು ನೋವನ್ನು ಸಹಿಸದೇ ಒದ್ದಾಡುತ್ತಿರುವಾಗ ಸಹ ಆಟಗಾರ ಡ್ರೆಸ್ಸಿಂಗ್ ರೂಂ ಕಡೆಗೆ ಸನ್ನೆ ಮಾಡಿ ವೈದ್ಯಕೀಯ ನೆರವು ಯಾಚಿಸಿದರು. ಇಷ್ಟೇಲ್ಲಾ ಆಗುತ್ತಿದ್ದರೂ ದಿಲ್ಲಿ ಆಟಗಾರರು ಹಾಗು ಅಂಪೈರ್ ಕೂಡ ಯಾವ ಪ್ರತಿಕ್ರಿಯೆ ನೀಡದೆ ತಮ್ಮಪಾಡಿಗೆ ತಾವಿದುದ್ದನ್ನು ಕಂಡು ಎಲ್ಲರೂ ಟೀಕಿಸಿದ್ದಾರೆ. ಭಾರತದ ಮಾಜಿ ನಾಯಕ ಎಂ.ಎಸ್. ಧೋನಿಯವರಿಂದ ಕ್ರೀಡಾಸ್ಪೂರ್ತಿಯನ್ನು ಕಲಿಯಿರಿ ಎಂದು ದಿಲ್ಲಿ ಆಟಗಾರರಿಗೆ ಅಭಿಮಾನಿಗಳು ಸಲಹೆ ನೀಡಿದ್ದಾರೆ.





ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ