ಕೊಹ್ಲಿ-ಧೋನಿ ಅಪ್ಪುಗೆಯ ಫೋಟೋಗೆ ಮೆಚ್ಚುಗೆಯ ಸುರಿಮಳೆ

ಗುರುವಾರ, 26 ಏಪ್ರಿಲ್ 2018 (20:14 IST)
ಬೆಂಗಳೂರು: ವಿರಾಟ್ ಕೊಹ್ಲಿ ಹಾಗೂ ಎಂ.ಎಸ್. ಧೋನಿ ಅವರ ಅಪ್ಪುಗೆಯ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಫೋಟೋಗೆ ಸಾಕಷ್ಟು ಜನರು ಮೆಚ್ಚುಗೆಯನನು ಕೂಡ ವ್ಯಕ್ತಪಡಿಸಿದ್ದಾರೆ.


ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ವಿರಾಟ್ ಹಾಗೂ ಧೋನಿ ಪರಸ್ಪರ ಅಪ್ಪಿ ಕೊಂಡಿರುವ ಫೋಟೋ ಎಲ್ಲರ ಗಮನ ಸೆಳೆದಿದೆ.


ಧೋನಿ ಅವರು ಸಿಕ್ಸರ್ ಬಾರಿಸುವುದನ್ನು ನೋಡುವುದು ಇಷ್ಟ. ಆದರೆ ಅದು ನಮಮ ತಂಡದ ವಿರುದ್ಧ ಅಲ್ಲ. ಟೂರ್ನಿಯಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದನ್ನು ನೋಡಲು ತುಂಬ ಖುಷಿಯಾಗುತ್ತದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ