ರಾಜಕಾರಣಿ ಬೆನ್ನು ಬಿಡಿ, ಕ್ರೀಡಾಪಟು ಹಿಂದೆ ಓಡಿ: ಮಾಧ್ಯಮಗಳಿಗೆ ಮೋದಿ ಸಲಹೆ

ಶನಿವಾರ, 3 ಸೆಪ್ಟಂಬರ್ 2016 (17:15 IST)
ಪ್ರಧಾನಿ ಮೋದಿ ಮಾಧ್ಯಮಗಳಿಗೊಂದು ಅತ್ಯುತ್ತಮ ಸಲಹೆ ನೀಡಿದ್ದಾರೆ. ಸದಾ ರಾಜಕಾರಣಿಗಳ ಹಿಂದೆ ಓಡುವ ಬದಲು ನಮ್ಮ ಕ್ರೀಡಾಪಟುಗಳ ದೈನಂದಿನ ಸಂಘರ್ಷವನ್ನು ಬೆಳಕಿಗೆ ತನ್ನಿ ಎಂದವರು ಹೇಳಿದ್ದಾರೆ. 
 
ರಾಷ್ಟ್ರೀಯ ಸುದ್ದಿಮಾಧ್ಯಮ ಒಂದರ ಜತೆ ಮಾತನ್ನಾಡುತ್ತಿದ್ದ ಅವರು ತಮ್ಮ ಸಾಧನೆ ಮೂಲಕ ನಮ್ಮ ದೇಶಕ್ಕೆ ಹೆಮ್ಮೆ ತರುವ ಕ್ರೀಡಾಪಟುಗಳು ಪ್ರತಿದಿನ ಅದಕ್ಕಾಗಿ ಬೆವರು ಸುರಿಸುತ್ತಾರೆ. ಇದನ್ನು ಮುಖ್ಯಾಂಶವನ್ನಾಗಿಸಿ ಎಂದರು.  
 
ರಾಜಕಾರಣಿಗಳ ಬೆನ್ನತ್ತುವ ಬದಲು ಮಾಧ್ಯಮಗಳು ಭಾರತೀಯ ಕ್ರೀಡಾಪಟುಗಳ ಪರಿಶ್ರಮದ ಕಥೆಯನ್ನು ಬೆಳಕಿಗೆ ತರಬೇಕು. ನೀವು ರಿಯೋಗೆ ಹೋಗಿದ್ದ 30 ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಳ್ಳಿ. ಅವರ ದೈನಂದಿನ ವೇಳಾಪಟ್ಟಿ ಏನೆಂಬುದನ್ನು ದೇಶಕ್ಕೆ ತೋರಿಸಿ.  ಅವರ ಪರಿಶ್ರಮದ ಕಥೆಯನ್ನು ನೋಡಿಯಾದರೂ ನಮ್ಮ ಕ್ರೀಡಾಪಟುಗಳನ್ನು ನೋಡುವ ದೃಷ್ಟಿಯಲ್ಲಿ ಬದಲಾವಣೆಯಾಗಬಹುದು ಎಂದು ಪ್ರಧಾನಿ ಹೇಳಿದ್ದಾರೆ. 
 
ದೇಶವನ್ನು ಪ್ರತಿನಿಧಿಸುವ ಮುನ್ನ ಭಾರತೀಯ ಕ್ರೀಡಾಪಟು 10-12 ವರ್ಷ ಕಠಿಣ ಪರಿಶ್ರಮ, ತರಬೇತಿ ಪಡೆಯುತ್ತಾನೆ. ತಾವು ಯಶಸ್ಸು ಗಳಿಸದಿದ್ದರೂ ಕಠಿಣ ಪರಿಶ್ರಮದ ಜತೆ ರಾಜಿಯಾಗುವುದಿಲ್ಲ ಎಂದಿದ್ದಾರೆ ಪ್ರಧಾನಿ.
 
ರಿಯೋ ಓಲಂಪಿಕ್ಸ್‌ನುದ್ದಕ್ಕೂ ಪ್ರಧಾನಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನದ ಬಗ್ಗೆ ಪ್ರಧಾನಿ ಧನಾತ್ಮಕ ನಿಲುವು, ಆಶಾವಾದವನ್ನು ವ್ಯಕ್ತ ಪಡಿಸುತ್ತಲೇ ಇದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ