Neeraj Chopra wedding: ಸೀಕ್ರೆಟ್ ಮಾಡೋದು ಹೇಗೆ ಅಂತ ನೀರಜ್ ಚೋಪ್ರಾರಿಂದ ಕಲಿಯಬೇಕು

Krishnaveni K

ಸೋಮವಾರ, 20 ಜನವರಿ 2025 (09:42 IST)
ನವದೆಹಲಿ: ಭಾರತದ ಚಿನ್ನದ ಹುಡುಗ ಎಂದೇ ಖ್ಯಾತರಾಗಿರುವ ಜ್ಯಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಳಿವೇ ನೀಡದೇ ಅವರು ಮದುವೆಯಾಗಿದ್ದಕ್ಕೆ ನೆಟ್ಟಿಗರು ಸೀಕ್ರೆಟ್ ಮಾಡೋದು ಹೇಗೆ ಅಂತ ಅವರನ್ನು ನೋಡಿ ಕಲಿಯಬೇಕು ಎಂದು ಟ್ರೋಲ್ ಮಾಡುತ್ತಿದ್ದಾರೆ.

ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಸದ್ದಿಲ್ಲದೇ ಮದುವೆಯಾಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನಿನ್ನೆ ನೀರಜ್ ಚೋಪ್ರಾ ಮದುವೆ ಫೋಟೋ ಹಾಕಿದಾಗಲೇ ಅವರು ಮದುವೆಯಾಗಿದ್ದಾರೆ ಎಂದು ಎಲ್ಲರಿಗೂ ಗೊತ್ತಾಗಿದ್ದು. ಅಷ್ಟರಮಟ್ಟಿಗೆ ಮಾಧ್ಯಮಗಳಿಂದಲೂ ಸೀಕ್ರೆಟ್ ಕಾಪಾಡಿಕೊಂಡಿದ್ದಾರೆ!

ಹಿಮಾನಿ ಮೋರ್ ಎಂಬ ಸುಂದರಿ ಜೊತೆ ಹ್ಯಾಂಡ್ಸಮ್ ಹುಡುಗ ನೀರಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪತ್ನಿ ಜೊತೆಗೆ ವಿವಾಹದ ದಿರಿಸಿನಲ್ಲಿರುವ ಫೋಟೋಗಳನ್ನು ನೀರಜ್ ಹಂಚಿಕೊಂಡಿದ್ದಾರೆ. ನನ್ನ ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಇದನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಸೆಲೆಬ್ರಿಟಿಗಳು ಒಂದಿಂಚು ಕದಲಿದರೂ ಗೊತ್ತಾಗುವ ಮಾಧ್ಯಮಗಳಿಂದಲೂ ಇಂತಹದ್ದೊಂದು ದೊಡ್ಡ ಸೀಕ್ರೆಟ್ ಮರೆಮಾಚಿದ್ದು ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ನೀರಜ್ ಮದುವೆ ಬಗ್ಗೆ ಸಾಕಷ್ಟು ತಮಾಷೆಯ ಕಾಮೆಂಟ್ ಗಳು ಬಂದಿವೆ. ಸೀಕ್ರೆಟ್ ನಿಭಾಯಿಸುವುದು ಹೇಗೆ ಎಂದು ನೀರಜ್ ನೋಡಿ ಕಲಿಯಬೇಕು. ಟೀಂ ಇಂಡಿಯಾ ಕ್ರಿಕೆಟಿಗರನ್ನು ನೋಡಿದರೆ ತಮ್ಮ ಸಹ ಆಟಗಾರ ಯಾವ ಚೆಡ್ಡಿ ಕಲರ್ ಹಾಕಿಕೊಂಡಿದ್ದ ಎನ್ನುವುದನ್ನೂ ಮಾಧ್ಯಮಗಳಿಗೆ ಬಿಟ್ಟು ಕೊಡುತ್ತಾರೆ ಎಂದು ಕಾಲೆಳೆದಿದ್ದಾರೆ. ಜೊತೆಗೆ ಗೋಲ್ಡನ್ ಗೆ ಹಲವರಿಂದ ಶುಭ ಹಾರೈಕೆಗಳೂ ಬಂದಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ