ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಪಾಕ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು

ಭಾನುವಾರ, 18 ಜೂನ್ 2017 (22:24 IST)
ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ಸರ್ಫರಾಜ್‌ ಅಹ್ಮದ್‌ ನೇತೃತ್ವದ ಪಾಕ್‌ ತಂಡ ಮೊದಲ ಬಾರಿಗೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಮುಡಿಗೇರಿಸಿಕೊಂಡಿದೆ.
 
ಬದ್ಧ ಎದುರಾಳಿ ಪಾಕಿಸ್ಥಾನದ ವಿರುದ್ಧ ಇದುವರೆಗೂ ಅಜೇಯವಾಗಿಯೇ ಇದ್ದ ಟಿಂ ಇಂಡಿಯಾದ ಗೆಲುವಿನ ಸರಣಿ 180 ರನ್ನುಗಳ ಹೀನಾಯ ಸೋಲಿನ ಮೂಲಕ ಮುರಿಯಲ್ಪಟ್ಟಿದೆ. ಪಾಕಿಸ್ಥಾನ ತನ್ನ ಸಂಘಟಿತ ಹೋರಾಟದ ಮೂಲಕ ಭಾರತವನ್ನು ಭರ್ಜರಿಯಾಗಿ ಮಣಿಸಿದೆ
 
ಪಾಕಿಸ್ತಾನ ತಂಡದ ಬೌಲರ್ ಮಾರಕ ಬೌಲಿಂಗ್‌ ಮುಂದೆ ಭಾರತದ ಯಾವೊಬ್ಬ ಟಾಪ್‌ ಬ್ಯಾಟ್ಸ್‌ಮನ್‌ಗಳ ಆಟ ನಡೆಯಲಿಲ್ಲ. ಹೀಗಾಗಿ ತಂಡ ಕೇವಲ 30.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 158ರನ್‌ ಗಳಿಸಲು ಮಾತ್ರ ಶಕ್ತವಾಯಿತು. ಇದರಿಂದ 180ರನ್‌ಗಳ ಹೀನಾಯ ಸೋಲು ಕಂಡಿದೆ.
 

ವೆಬ್ದುನಿಯಾವನ್ನು ಓದಿ