ಉದ್ಘಾಟನಾ ಸಮಾರಂಭದಲ್ಲಿ ಎಲ್ಲಾ ದೇಶಗಳ ಕ್ರೀಡಾಪಟುಗಳ ನಿಯೋಗ ಪಥಸಂಚಲನ ನಡೆಸಲಿದೆ. ಭಾರತದ ಪಥಸಂಚಲನದ ನೇತೃತ್ವವನ್ನು ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ವಹಿಸಲಿದ್ದಾರೆ. ಭಾರತ ಈ ಬಾರಿ 117 ಸ್ಪರ್ಧಿಗಳನ್ನು ಒಲಿಂಪಿಕ್ಸ್ ಗೆ ಕಳುಹಿಸಿದೆ. ಬ್ಯಾಡ್ಮಿಂಟನ್, ಹಾಕಿ, ಈಜು, ಶೂಟಿಂಗ್, ಆರ್ಚರಿ, ಕುಸ್ತಿ, ಬಾಕ್ಸಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಭಾರತದ ಕ್ರೀಡಾಪಟುಗಳು ಸ್ಪರ್ಧೆ ನಡೆಸಲಿದ್ದಾರೆ. ಕರ್ನಾಟಕದಿಂದ 9 ಸ್ಪರ್ಧಿಗಳು ಕಣದಲ್ಲಿದ್ದಾರೆ.
1924 ರಲ್ಲಿ ಆರಂಭವಾದ ಒಲಿಂಪಿಕ್ಸ್ ಕ್ರೀಡಾಕೂಟ ಈಗ ಶತಮಾನದ ಹೊಸ್ತಿಲಲ್ಲಿದೆ. ಹೀಗಾಗಿ ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್ ವಿಶೇಷವಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ ಆಯೋಜಿಸಲು 68.54 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. 1011 ಚಿನ್ನ, ಬೆಳ್ಳಿ, ಕಂಚು ಪದಕಗಳನ್ನು ಸ್ಪರ್ಧಿಗಳಿಗೆ ನೀಡಲಾಗುತ್ತದೆ. ಒಲಿಂಪಿಕ್ಸ್ ಪಂದ್ಯಾವಳಿಗಳ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ನೇರಪ್ರಸಾರ ಮಾಡಲಾಗುತ್ತದೆ.