Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿರುವ ಕನ್ನಡಿಗರು ಇವರೇ

Krishnaveni K

ಗುರುವಾರ, 25 ಜುಲೈ 2024 (10:24 IST)
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಗೆ ನಾಳೆಯಿಂದ ಅಧಿಕೃತವಾಗಿ ಚಾಲನೆ ಸಿಗಲಿದೆ. ಈ ಬಾರಿ ಭಾರತದಿಂದ 117 ಅಥ್ಲೆಟ್ ಗಳು ಒಲಿಂಪಿಕ್ಸ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಆ ಪೈಕಿ ಕನ್ನಡಿಗರು ಯಾರು, ಯಾವ ಸ್ಪರ್ಧೆಯಲ್ಲಿದ್ದಾರೆ ಎಂದು ನೋಡಿ.

ಕರ್ನಾಟಕದಿಂದ ಈ ಬಾರಿ 9 ಅಥ್ಲೆಟ್ ಗಳು ಒಲಿಂಪಿಕ್ಸ್ ಕಣದಲ್ಲಿದ್ದಾರೆ. ಗಾಲ್ಫ್, ಬ್ಯಾಡ್ಮಿಂಟನ್, ಈಜು, ಟೆನಿಸ್, ರಿಲೇ ಮುಂತಾದ ವಿಭಾಗಗಳಲ್ಲಿ ಕರ್ನಾಟಕದ ಸ್ಪರ್ಧಿಗಳು ಭಾಗಿಯಾಗುತ್ತಿದ್ದಾರೆ. ಬ್ಯಾಡ್ಮಿಂಟನ್ ನಲ್ಲಿ ಅಶ್ವಿನಿ ಪೊನ್ನಪ್ಪ, ಟೆನಿಸ್ ನಲ್ಲಿ ರೋಹನ್ ಬೋಪಣ್ಣ, ರಿಲೇ ಪುರುಷರ ವಿಭಾಗದಲ್ಲಿ ಮಿಜೋ ಚಾಕೋ, ಬಾಕ್ಸಿಂಗ್ ನಲ್ಲಿ ನಿಶಾಂತ್ ದೇವ್, ಮಹಿಳೆಯರ ರಿಲೇಯಲ್ಲಿ ಪೂವಮ್ಮ, ಗಾಲ್ಫ್ ನಲ್ಲಿ ಅದಿತಿ ಅಶೋಕ್, ಈಜಿನಲ್ಲಿ ಧಿನಿಧಿ ದೇಸಿಂಗೊ, ಶ್ರೀಹರಿ ನಟರಾಜ್, ಟಿಟಿಯಲ್ಲಿ ಅರ್ಚನಾ ಕಾಮತ್ ಈ ಬಾರಿ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿರುವ ಕರ್ನಾಟಕದ ಮೂಲದವರಾಗಿದ್ದಾರೆ.

ಈ ಪೈಕಿ ಅದಿತಿ ಅಶೋಕ್ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ, ಅಶ್ವಿನಿ ಪೊನ್ನಪ್ಪ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 2 ಚಿನ್ನ, 3 ಬೆಳ್ಳಿ, 1 ಕಂಚು, ದಿನಿಧಿ 200 ಮೀ. ರಾಷ್ಟ್ರೀಯ ದಾಖಲೆ, ಎಂ ಆರ್ ಪೂವಮ್ಮ ಏಷ್ಯನ್ ಗೇಮ್ಸ್ ನಲ್ಲಿ 3 ಚಿನ್ನ, ಅರ್ಚನಾ ಕಾಮತ್ ನ್ಯಾಷನಲ್ ಗೇಮ್ಸ್ ನಲ್ಲಿ ಚಿನ್ನ, ಶ್ರೀಹರಿ ನಟರಾಜ್ ದಕ್ಷಿಣ ಏಷ್ಯಾ ಕ್ರೀಡಾ ಕೂಟದಲ್ಲಿ 4 ಚಿನ್ನ, ರೋಹಿತ್ ಬೋಪಣ್ಣ ಫ್ರೆಂಚ್ ಓಪನ್ ಚಾಂಪಿಯನ್, ನಿಶಾಂತ್ ದೇವವ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚು, ಮಿಜೋ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದವರಾಗಿದ್ದಾರೆ.

ಈ ಬಾರಿ ಕರ್ನಾಟಕದಿಂದ ಸ್ಪರ್ಧಿಸುತ್ತಿರುವವರಲ್ಲಿ ಈಜು ಸ್ಪರ್ಧಿ ಧಿನಿಧಿ ಕೇವಲ 14 ವರ್ಷದವರು. ಉಳಿದಂತೆ ರೋಹನ್ ಬೋಪಣ್ಣ, ಅಶ್ವಿನಿ ಪೊನ್ನಪ್ಪ, ಪೂವಮ್ಮ ಅನುಭವಿ ಕ್ರೀಡಾಳುಗಳು. ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವುದು ಅಷ್ಟು ಸುಲಭವಲ್ಲ. ಆದರೆ ಗೆದ್ದು ದೇಶಕ್ಕೆ ಮತ್ತು ರಾಜ್ಯಕ್ಕೆ ಹೆಮ್ಮೆ ತರಲಿ ಎಂಬುದೇ ನಮ್ಮ ಹಾರೈಕೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ