Paris Olympics: ನೀರಜ್ ಚೋಪ್ರಾ ಪಂದ್ಯ ಇಂದು ಎಷ್ಟು ಗಂಟೆಗೆ ವೀಕ್ಷಿಸಬೇಕು

Krishnaveni K

ಗುರುವಾರ, 8 ಆಗಸ್ಟ್ 2024 (09:01 IST)
Photo Credit: Facebook
ಪ್ಯಾರಿಸ್: ಭಾರತ ಇದುವರೆಗೆ ನಿರೀಕ್ಷಿಸಿದ್ದ ತಾರೆಯರೆಲ್ಲಾ ಈ ಬಾರಿ ಒಲಿಂಪಿಕ್ಸ್ ನಲ್ಲಿ ನಿರಾಸೆ ಮೂಡಿಸಿದ್ದಾರೆ. ಆದರೆ ಇದೀಗ ಇಡೀ ಭಾರತ ಕಾತುರದಿಂದ ಎದಿರು ನೋಡುತ್ತಿರುವುದು ಜ್ಯಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಪಂದ್ಯವನ್ನು. ಅದು ಇಂದು ನಡೆಯಲಿದೆ.

ಮೊನ್ನೆ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಬಿ ಗುಂಪಿನಲ್ಲಿ ಅಗ್ರ ಸ್ಥಾನಿಯಾಗಿ ಹೊರಹೊಮ್ಮಿದ್ದರು. ಮೊದಲ ಎಸೆತದಲ್ಲೇ 89 ಮೀ. ಎಸೆದು ಫೈನಲ್ ಗೆ ಅರ್ಹತೆ ಗಿಟ್ಟಿಸಿದ್ದರು. ಇಂದು ಜ್ಯಾವೆಲಿನ್ ಥ್ರೋ ಪುರುಷರ ವಿಭಾಗದ ಫೈನಲ್ ಸುತ್ತು ನಡೆಯಲಿದೆ.

ಕಳೆದ ಬಾರಿ ಒಲಿಂಪಿಕ್ಸ್ ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು. ಹೀಗಾಗಿ ಅವರ ಮೇಲೆ ಅಪಾರ ಭರವಸೆಯಿದೆ. ಆದರೆ ಈ ಬಾರಿ ಅವರಿಗೆ ಪೈಪೋಟಿಯೂ ಸಾಕಷ್ಟಿದೆ. ದೇಶವೇ ತನ್ನ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟಿರುವುದು ನೀರಜ್ ಗೂ ಅರಿವಿದೆ. ಈ ಕಾರಣಕ್ಕೇ ಅವರು ಅರ್ಹತಾ ಸುತ್ತಿನ ಪಂದ್ಯದ ಬಳಿಕ ಮಾಧ್ಯಮಗಳ ಮುಂದೆ ಹೆಚ್ಚು ಹೊತ್ತು ಮಾತನಾಡುತ್ತಾ ನಿಲ್ಲದೇ ವಿಶ್ರಾಂತಿ ಪಡೆಎಯಲು ತೆರಳಿದ್ದರು.

ಇಂದು ಮಧ್ಯಾಹ್ನ 11.55 ಕ್ಕೆ ಜ್ಯಾವೆಲಿನ್ ಥ್ರೋ ಪಂದ್ಯಗಳು ಆರಂಭವಾಗಲಿದೆ. ಪ್ರತೀ ಆಟಗಾರನಿಗೂ ಮೂರು ಬಾರಿ ಎಸೆಯಲು ಅವಕಾಶವಿರುತ್ತದೆ. ಗರಿಷ್ಠ ದೂರ ಎಸೆದ ಆಟಗಾರ ಚಿನ್ನಕ್ಕೆ ಮುತ್ತಿಕ್ಕುತ್ತಾನೆ. ಈ ಬಾರಿಯೂ ಆ ತಾರೆ ನೀರಜ್ ಚೋಪ್ರಾ ಆಗಿರಲಿ ಎಂಬುದು ಕೋಟ್ಯಾಂತರ ಭಾರತೀಯರ ಹಾರೈಕೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ