ಓಲಂಪಿಕ್ಸ್, ಕಾಮನವೆಲ್ತ್, ಏಶಿಯನ್ ಗೇಮ್ಸ್ ಏನೆಂದು ತಿಳಿಯದೇ ಆಟವಾಡಲು ಪ್ರಾರಂಭಿಸಿದ ಹುಡುಗಿಯೊಬ್ಬಳು ಇಂದು ದೇಶದಲ್ಲಿಯೇ ಹೆಚ್ಚು ಚರ್ಚೆಗೊಳಗಾಗುತ್ತಿರುವ ವ್ಯಕ್ತಿಯಾಗಿ ಬೆಳೆದಿದ್ದು ಇತಿಹಾಸ.
ಸೆಪ್ಟೆಂಬರ್ 3, 1992ರಲ್ಲಿ ಜನಿಸಿದ್ದ ಸಾಕ್ಷಿ ತಂದೆ ಸುದೇಶ್ ಮಲ್ಲಿಕ್ ಮತ್ತು ತಾಯಿ ಸುಖಬಿರ್ ಮಲ್ಲಿಕ್. ಹೆಣ್ಣು ಭ್ರೂಣ ಹತ್ಯೆ ಕುಖ್ಯಾತಿಗೆ ಒಳಗಾಗಿರುವ ರಾಜ್ಯ ಹರಿಯಾಣಾದಲ್ಲಿ ಜನಿಸಿದ ಸಾಕ್ಷಿ ತಾವು ಈ ಮಟ್ಟಕ್ಕೆ ತಲುಪಲು ತಂದೆ - ತಾಯಿ ಪ್ರೋತ್ಸಾವವೇ ಕಾರಣ ಎನ್ನುತ್ತಾರೆ.