ರಿಯೊ ಒಲಿಂಪಿಕ್ಸ್‌ನಿಂದ ನಿಷೇಧ: ರಷ್ಯಾ ಅಥ್ಲೀಟ್‌ಗಳ ಕೋಪ, ಹತಾಶೆ

ಶುಕ್ರವಾರ, 22 ಜುಲೈ 2016 (16:26 IST)
ಉದ್ದೀಪನಾ ಮದ್ದುಸೇವನೆಯಿಂದ ರಷ್ಯಾದ ಟ್ರಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳಿಗೆ ನಿಷೇಧ ವಿಧಿಸಿದ ಕ್ರಮದ ವಿರುದ್ಧ ಮೇಲ್ಮನವಿಯನ್ನು ಕ್ರೀಡಾನ್ಯಾಯಾಲಯ ತಿರಸ್ಕರಿಸಿದ್ದರಿಂದ ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ತಮ್ಮ ಕನಸು ನುಚ್ಚುನೂರಾಗಿದೆ ಎಂದು ರಷ್ಯಾ ಅಥ್ಲೀಟ್‌‍ಗಳು ಕೋಪ ಮತ್ತು ಹತಾಶೆಯ ಪ್ರತಿಕ್ರಿಯೆ ನೀಡಿದ್ದಾರೆ.

ಹೈಜಂಪ್ ಪಟು ಮಾರಪಿಯಾ ಕುಚಿನಾ ಬ್ರೆಜಿಲ್ ಕ್ರೀಡಾಕೂಟಕ್ಕಾಗಿ ಮಾಸ್ಕೊ ಬಳಿ ಅಭ್ಯಾಸ ಮಾಡುವಾಗ ಈ ಸುದ್ದಿ ಕೇಳಿ ಆಘಾತಕ್ಕೊಳಗಾದರು.
 
ಒಲಿಂಪಿಕ್ಸ್‌ನಲ್ಲಿ ನಾನು ಮೊದಲ ಬಾರಿಗೆ ಭಾಗವಹಿಸುವ ಉದ್ದೇಶ ಹೊಂದಿದ್ದೆ. ಆದರೆ ಈ ಸುದ್ದಿಯಿಂದ ಅಥ್ಲೀಟ್ ಮತ್ತು ವೈಯಕ್ತಿಕವಾಗಿ ಗಂಭೀರ ಪೆಟ್ಟು ಬಿದ್ದಿದೆ ಎಂದು ಹೇಳಿದ್ದಾರೆ. 
 
ಎರಡು ಬಾರಿ ಒಲಿಂಪಿಕ್ ಪೋಲ್ ವಾಲ್ಟ್ ಚಿನ್ನದ ಪದಕ ವಿಜೇತೆ ಯೆಲೆನಾ ಇಸಿನ್‌ಬಯೇವಾ ಐದನೇ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ತಮ್ಮ ವೃತ್ತಿಜೀವನಕ್ಕೆ ತೆರೆಎಳೆಯಲು ಬಯಸಿದ್ದರು. ಆದರೆ ಇದರಿಂದ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಮಾರಕ ಪೆಟ್ಟು ಬಿದ್ದಿದೆ ಎಂದು ಉದ್ಗರಿಸಿದ್ದಾರೆ. ಅಥ್ಲೀಟ್‌‍ಗಳಿಗೆ ಇವೆಲ್ಲಾ ಅಂತ್ಯಕ್ರಿಯೆಗಾಗಿ ಧನ್ಯವಾದಗಳು ಎಂದು ಅವರು ವ್ಯಂಗ್ಯವಾಡಿದ್ದಾರೆ.
 
ಬಳಿಕ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಎಲ್ಲ ರಿಯೊ ಚಿನ್ನದ ಪದಕಗಳು ಅರ್ಥಹೀನ ಎಂದು ಹೇಳಿದ್ದಾರೆ. ಅವರೆಲ್ಲಾ ನಿಷ್ಕಳಂತ ವಿದೇಶಿ ಅಥ್ಲೀಟ್‌ಗಳು ನಿಟ್ಟುಸಿರು ಬಿಟ್ಟು ನಮ್ಮ ಗೈರುಹಾಜರಿಯಲ್ಲಿ ಅವೆಲ್ಲಾ ಚಿನ್ನದಪದಕಗಳನ್ನು ಗೆಲ್ಲಲಿ ಎಂದು ಹಾರೈಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ