ರಿಯೋ ಒಲಿಂಪಿಕ್ಸ್ ಗೆ ಯಾಕಾದ್ರೂ ಹೋಗಿದ್ದೆನೋ?!: ಸೈನಾ ನೆಹ್ವಾಲ್
‘ಆಗ ಏನಾಗಿತ್ತು ಎಂದು ನನಗೆ ಮಾತ್ರ ಗೊತ್ತು. ನಾನು ರಿಯೋಗೆ ಹೋಗಲೇ ಬಾರದಿತ್ತು. ನನಗೆ ಆಗ ಅಷ್ಟು ದೊಡ್ಡ ಗಾಯವಿದೆ ಎಂದು ಗೊತ್ತೇ ಇರಲಿಲ್ಲ. ಆದರೆ ನನ್ನ ಕೋಚ್ ಮತ್ತು ಹೆತ್ತವರ ನಂಬಿಕೆಯೇ ನನ್ನನ್ನು ಕಾಪಾಡಿತು. ಈಗಲೂ ಆಡುವಾಗ ಮೊಣಕಾಲಿನಲ್ಲಿ ಕೆಲವೊಮ್ಮೆ ಸೆಳೆತ ಕಾಣಿಸಿಕೊಳ್ಳುತ್ತದೆ’ ಎಂದು ಮಂಡಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಸೈನಾ ನೆಹ್ವಾಲ್ ಹೇಳಿದ್ದಾರೆ.