Sania Mirza: ಆಪರೇಷನ್ ಸಿಂದೂರ ಬಗ್ಗೆ ಪಾಕಿಸ್ತಾನ ಮಾಜಿ ಸೊಸೆ ಸಾನಿಯಾ ಮಿರ್ಜಾ ಹೇಳಿದ್ದು ಕೇಳಿದ್ರೆ ಶಾಕ್ ಆಗ್ತೀರಿ
ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಈ ಹಿಂದೆ ಪಾಕಿಸ್ತಾನ ಮೂಲದ ಕ್ರಿಕೆಟಿಗ ಶೊಯೇಬ್ ಮಲಿಕ್ ಪತ್ನಿಯಾಗಿದ್ದರು. ಆದರೆ ದಂಪತಿ ಈಗ ವಿಚ್ಛೇದನ ಪಡೆದಿದ್ದಾರೆ. ಇದೀಗ ಆಪರೇಷನ್ ಸಿಂದೂರ ಬಗ್ಗೆ ಸಾನಿಯಾ ಮಿರ್ಜಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಆಪರೇಷನ್ ಸಿಂದೂರ ಬಳಿಕ ಭಾರತೀಯ ಸೇನೆ ಇಬ್ಬರು ಮಹಿಳಾ ಅಧಿಕಾರಿಗಳನ್ನು ಕೂರಿಸಿಕೊಂಡು ದಾಳಿ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಕರೆದಿತ್ತು. ಈ ಫೋಟೋಗಳನ್ನು ಹಂಚಿಕೊಂಡಿರುವ ಸಾನಿಯಾ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಈ ಫೋಟೋಗಳೇ ದಾಳಿಯ ವಿಶೇಷತೆ ಬಗ್ಗೆ ಸಾರಿ ಹೇಳುತ್ತದೆ ಎಂದಿದ್ದಾರೆ. ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ ಉಗ್ರರು ಮಹಿಳೆಯರ ಸಿಂದೂರ ಅಳಿಸಿದ್ದರು. ಅದಕ್ಕೆಂದೇ ಭಾರತೀಯ ಸೇನೆ ಆಪರೇಷನ್ ಸಿಂದೂರ ಹೆಸರಿನಲ್ಲಿ ದಾಳಿ ನಡೆಸಿತ್ತು. ಇದನ್ನು ಸಾನಿಯಾ ಮಿರ್ಜಾ ಕೊಂಡಾಡಿದ್ದಾರೆ.