ಯಾರೊಂದಿಗೂ ಮಾತಿಲ್ಲ, ಕತೆಯಿಲ್ಲದೇ ಪ್ಯಾರಿಸ್ ನಿಂದ ತೆರಳಿದ ವಿನೇಶ್ ಪೋಗಟ್: ಇಂದು ತೀರ್ಪು ಹೊರಬರುವ ಸಾಧ್ಯತೆ

Krishnaveni K

ಮಂಗಳವಾರ, 13 ಆಗಸ್ಟ್ 2024 (10:51 IST)
ಪ್ಯಾರಿಸ್: ಈ ಬಾರಿ ಒಲಿಂಪಿಕ್ಸ್ ನಲ್ಲಿ 50 ಕೆಜಿ ಮಹಿಳೆಯರ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿಯೂ ತೂಕ ಹೆಚ್ಚಳದಿಂದಾಗಿ ಅನರ್ಹಗೊಂಡಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಈಗ ಸದ್ದಿಲ್ಲದೇ ಒಲಿಂಪಿಕ್ಸ್ ಗ್ರಾಮದಿಂದ ತೆರಳಿದ್ದಾರೆ.

ವಿನೇಶ್ ಫೋಗಟ್ ಫೈನಲ್ ನಿಂದ ಅನರ್ಹಗೊಂಡಿದ್ದು ಭಾರೀ ವಿವಾದಕ್ಕೆ ಕಾರಣವಾಯಿತು. ಭಾರತ ಈಗಾಗಲೇ ಅಂತಾರಾಷ್ಟ್ರೀಯ ಕ್ರೀಡಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದೆ. ಫೈನಲ್ ತನಕ ಬಂದಿರುವ ವಿನೇಶ್ ಗೆ ಬೆಳ್ಳಿ ಪದಕ ನೀಡಬೇಕೆಂದು ಪ್ರಾಧಿಕಾರಕ್ಕೆ ಭಾರತ ಮನವಿ ಸಲ್ಲಿಸಿತ್ತು. ಅದರ ತೀರ್ಪು ಇನ್ನೂ ಹೊರಬಂದಿಲ್ಲ.

ಇದರ ಬೆನ್ನಲ್ಲೇ ಭಾರತೀಯ ಒಲಿಂಪಿಕ್ಸ್ ಸಮಿತಿ ಮುಖ್ಯಸ್ಥೆ ಪಿಟಿ ಉಷಾ ತೂಕ ಹೆಚ್ಚಳಕ್ಕೆ ವೈದ್ಯರ ತಂಡ ಹೊಣೆಯಲ್ಲ. ಇದಕ್ಕೆ ಕ್ರೀಡಾಳುಗಳೇ ಹೊಣೆಯಾಗಿರುತ್ತಾರೆ ಎಂದಿದ್ದೂ ವಿವಾದಕ್ಕೆ ಕಾರಣವಾಗಿತ್ತು. ಇದೆಲ್ಲದರ ನಡುವೆ ವಿನೇಶ್ ಸದ್ದಿಲ್ಲದೇ ಒಲಿಂಪಿಕ್ಸ್ ಗ್ರಾಮದಿಂದ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೊರಬಂದಿದ್ದಾರೆ. ವಿವಾದದ ಬಳಿಕ ಅವರು ಯಾರೊಂದಿಗೂ ಹೆಚ್ಚು ಬೆರೆಯುತ್ತಿಲ್ಲ ಎಂದು ತಿಳಿದುಬಂದಿದೆ.

ವಿನೇಶ್ ಯಾರ ಜೊತೆಗೂ ಎಚ್ಚು ಮಾತನಾಡಲು ಇಷ್ಟಪಡುತ್ತಿಲ್ಲ. ಈ ನಡುವೆ ವಿನೇಶ್ ಪರವಾಗಿ ಭಾರತ ಬೆಳ್ಳಿ ಪದಕಕ್ಕಾಗಿ ಸಲ್ಲಿಸಿದ ಮನವಿಯ ವಿಚಾರಣೆ ಪೂರ್ತಿಯಾಗಿದ್ದು, ಇಂದು ತೀರ್ಪು ಹೊರಬೀಳುವ ನಿರೀಕ್ಷೆಯಿದೆ. ಒಂದು ವೇಳೆ ವಿನೇಶ್ ಗೆ ಬೆಳ್ಳಿ ಪದಕ ನೀಡಲು ಕ್ರೀಡಾ ಪ್ರಾಧಿಕಾರ ಒಪ್ಪಿದರೆ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಸಿಕ್ಕಂತಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ