ಒಂದೇ ರಾತ್ರಿಯಲ್ಲೇ 4.6ಕೆಜಿ ತೂಕ ಕರಗಿಸಿದ್ದ ಕಂಚು ಗೆದ್ದ ಅಮನ್ ಸೆಹ್ರಾವತ್

Sampriya

ಭಾನುವಾರ, 11 ಆಗಸ್ಟ್ 2024 (13:04 IST)
Photo Courtesy X
ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ತೂಕ ಹೆಚ್ಚಳದಿಂದ ವಿನೇಶ್ ಫೋಗಟ್ ಅವರ ಚಿನ್ನದ ಕನಸ್ಸು ನುಚ್ಚುನೂರಾದ ಹಾಗೇ ಮತ್ತೋರ್ವ ಭಾರತ ಕುಸ್ತಪಟುವಿಗೆ ತೂಕದಿಂದಾಗಿ ಅನರ್ಹರಾಗುವ ಭೀತಿ ಎದುರಾಗಿತ್ತು.

ಭಾರತಕ್ಕೆ ಕಂಚಿನ ಕದಕ ತಂದುಕೊಟ್ಟು ಕುಸ್ತಿಪಟು ಅಮನ್ ಸೆಹ್ರಾವತ್ ಅವರಿಗೂ ತೂಕದಿಂದಾಗಿ ಸ್ಪರ್ಧೆಯಿಂದ ಅನರ್ಹರಾಗುವ ಭೀತಿ ಎದುರಾಗಿತ್ತು.  ಭಾರತದ ಅತ್ಯಂತ ಕಿರಿಯ ಒಲಿಂಪಿಕ್ ಕಂಚಿನ ಪದಕ ವಿಜೇತ ಅಮನ್ ಸೆಹ್ರಾವತ್ ಅವರು ತಮ್ಮ ಕಂಚಿನ ಪದಕದ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ವಿನೇಶ್ ಫೋಗಟ್ ಎದುರಿಸಿದ ಸವಾಲನ್ನೇ ಎದುರಿಸಿದ್ದಾರೆ.

ಗುರುವಾರ ಸೆಮಿಫೈನಲ್‌ನಲ್ಲಿ ಜಪಾನ್‌ನ ರೇ ಹಿಗುಚಿ ವಿರುದ್ಧ ಅಮನ್ ಸೋತರು. ನಂತರ ನಡೆದ ಕಂಚಿನ ಪದಕದ ಹೋರಾಟಕ್ಕೂ ಮುನ್ನಾ  ಅಮನ್ ಅವರ ತೂಗ ಮಿತಿಗಿಂತ (57) 4.6 ಕೆಜಿ ಹೆಚ್ಚು ತೂಕ ಹೊಂದಿದ್ದರು. ಇದು ಭಾರತ ತಂಡಕ್ಕೆ ಮತ್ತೊಮ್ಮೆ ಆಘಾತ ಎದುರಿಸುವಂತೆ ಮಾಡಿತ್ತು. 57 ಕೆಜಿ ವಿಭಾಗಕ್ಕೆ ಅರ್ಹತೆ ಪಡೆಯಲು ಅಮನ್ ಕೇವಲ 10 ಗಂಟೆಗಳಲ್ಲಿ 4.6 ಕಿಲೋಗ್ರಾಂಗಳಷ್ಟು ತೂಕವನ್ನು ಕಳೆದುಕೊಳ್ಳಬೇಕಾಯಿತು. ಇಬ್ಬರು ಹಿರಿಯ ಕೋಚ್‌ಗಳಾದ ಜಗಮಂದರ್ ಸಿಂಗ್ ಮತ್ತು ವೀರೇಂದ್ರ ದಹಿಯಾ ಅವರು ದೊಡ್ಡ ಸಹಾಸಕ್ಕೆ ಕೈ ಹಾಕಿದರು.

ಅಧಿಕ ತೂಕವನ್ನು ಕಳೆದುಕೊಳ್ಳಲು ಕೇವಲ 10 ಗಂಟೆಗಳಿರುವಾಗ, ದೈಹಿಕವಾಗಿ ಮಾನಸಿಕವಾಗಿಯೂ ಅವರಿಗೆ ದೊಡ್ಡ ಸವಾಲಾಗಿತ್ತು.

ಅವರ ತರಬೇತುದಾರರು ಅಮನ್ ತೂಕ ಇಳಿಸಲು ತಕ್ಷಣವೇ ಕ್ರಮ ಕೈಗೊಂಡರು. ತರಬೇತುದಾರರು  ಅಮನ್ ಅವರ ತೂಕ ತಗ್ಗಿಸಲು ದೈಹಿಕವಾಗಿ ಕಸರತ್ತು ನೀಡಿದರು.

ನಂತರ ಅಮನ್ ಅವರಿಗೆ ಒಂದು ಗಂಟೆ ಬಿಸಿ ಸ್ನಾನವನ್ನು ಮಾಡಿಸಲಾಯಿತು. ಬೆವರಿಸಲು ಟ್ರೆಡ್‌ಮಿಲ್‌ನಲ್ಲಿ ನಿರಂತರವಾಗಿ ಒಂದು ಗಂಟೆ ಕಾಲ ವರ್ಕೌಟ್ ಮಾಡಲಾಯಿತು.  ಇದಾದ ಬಳಿಕ ಅಮನ್‌ ಅವರಿಗೆ 30 ನಿಮಿಷಗಳ ವಿರಾಮವನ್ನು ನೀಡಲಾಯಿತು. ವಿರಾಮದ ನಂತರ ಅಮನ್ ತೂಕವನ್ನು ಕಳೆದುಕೊಳ್ಳಲು ಐದು ನಿಮಿಷಗಳ ಸೌನಾ ಸ್ನಾನದಲ್ಲಿ ತೊಡಗಿಸಿಕೊಂಡರು. ಈ ಹೊತ್ತಿಗೆ ಕೊನೆಯ ಸೆಷನ್ ಮುಗಿದಿತ್ತು. ಆದರೆ ಅಮನ್ ಅವರ ತೂಕ ನಿಗದಿತ ತೂಕಕ್ಕಿಂತ 900 ಗ್ರಾಂ ಹೆಚ್ಚಾಗಿತ್ತು. ಆದ್ದರಿಂದ ಮತ್ತೆ ತೂಕ ಇಳಿಕೆ ಮಾಡಲು ತರಬೇತುದಾರರು ಲಘು ಜಾಗಿಂಗ್ ಮಾಡಿಸಿದರು. ಕೊನೆಯ 15 ನಿಮಿಷಗಳು ಅಮನ್ ಅವರ ತೂಕವನ್ನು 56.9 ಕೆಜಿಗೆ ಇಳಿಸಲು ಸಹಾಯ ಮಾಡಿತು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ