ಏಷ್ಯನ್ ಗೇಮ್ಸ್ ಗೆ ಇಂದಿನಿಂದ ಚಾಲನೆ: ಲೈವ್ ಎಲ್ಲಿ ವೀಕ್ಷಿಸಬೇಕು?
ಇಂದು ಸಂಜೆ 4.30 ರಿಂದ ವರ್ಣರಂಜಿತ ಉದ್ಘಾಟನಾ ಸಮಾರಂಭ, ಪಥಸಂಚಲನ ನಡೆಯಲಿದೆ. ಭಾರತದ ಧ‍್ವಜಧಾರಿಗಳಾಗಿ ಈ ಬಾರಿ ಪುರುಷರ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಮಹಿಳಾ ಬಾಕ್ಸಿಂಗ್ ತಾರೆ ಲೊವ್ಲಿನಾ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತ ಇದುವರೆಗೆ ಕಳೆದ 18 ಏಷ್ಯನ್ ಗೇಮ್ಸ್ ಗಳಿಂದ 672 ಪದಕಗಳನ್ನು ಗೆದ್ದಿದೆ. ಈ ಬಾರಿ ಒಂದೇ ಗೇಮ್ಸ್ ನಲ್ಲಿ 100 ಪ್ಲಸ್ ಪದಕ ಗೆಲ್ಲುವ ಟಾರ್ಗೆಟ್ ಹೊಂದಿದೆ. ಈ ಬಾರಿ ಪುರುಷರ ಕ್ರಿಕೆಟ್ ತಂಡವೂ ಗೇಮ್ಸ್ ನ ಭಾಗವಾಗಿರುವುದು ವಿಶೇಷ. ಇಂದಿನಿಂದ ಅಕ್ಟೋಬರ್ 8 ರವರೆಗೆ ಏಷ್ಯನ್ ಗೇಮ್ಸ್ ನಡೆಯಲಿದೆ. ಎಲ್ಲಾ ಪಂದ್ಯಗಳ ನೇರಪ್ರಸಾರ ಸೋನಿ ನೆಟ್ ವರ್ಕ್ ವಾಹಿನಿ ಅಥವಾ ಸೋನಿ ಲೈವ್ ಆಪ್ ನಲ್ಲಿ ವೀಕ್ಷಿಸಬಹುದಾಗಿದೆ.