ಕ್ರೀಡಾ ಸಂಕೀರ್ಣವೊಂದನ್ನು ಉದ್ಘಾಟಿಸಲು ಜ್ವಾಲಾ ಸೂರತ್‌ಗೆ ತೆರಳಿದ್ದರು. ಮಾಧ್ಯಮದ ಜತೆ ಸಂವಾದದಲ್ಲಿ ಅವರನ್ನು ಅಜರುದ್ದೀನ್ ಜತೆ ಹೊಂದಿದ್ದ ಸಂಬಂಧ ಕುರಿತು ಪ್ರಶ್ನಿಸಿದಾಗ ಇದೊಂದು ಗಾಳಿಸುದ್ದಿಯಾಗಿದ್ದು, ನೀವು ಈ ಪ್ರಶ್ನೆಯನ್ನು ಪುನಃ ಪುನಃ ಏಕೆ ಕೇಳುತ್ತೀರಿ. ನಾನು ಇದನ್ನು ವದಂತಿ ಎಂದು ಹಿಂದೆಯೂ ಹೇಳಿದ್ದಾಗಾ ಜ್ವಾಲಾ ಗುಟ್ಟಾ ಸಿಟ್ಟಿನಿಂದ ಹೇಳಿದರು.
ಈ ನಡುವೆ ಅಜರುದ್ದೀನ್ ಆತ್ಮಕಥನ ಅಜರ್ ಚಿತ್ರವು ಬೆಳ್ಳಿತೆರೆಯ ಮೇಲೆ ಶೀಘ್ರವೇ ಬರಲಿದೆ. ಹಿಂದೆಯೂ ಅಜರ್ ಜತೆ ತಮ್ಮ ಸಂಬಂಧವನ್ನು ಅಸಂಬದ್ಧ ಎಂದು ತಳ್ಳಿಹಾಕಿದ ಜ್ವಾಲಾ, ತಮಗೆ ಕಳಂಕ ತರಲು ಬ್ಯಾಡ್ಮಿಂಟನ್ ಸಂಸ್ಥೆಯ ಕೆಲವರು ಪ್ರಯತ್ನಿಸಿದ್ದಾರೆ ಎಂದಿದ್ದರು. ಆದರೆ ಜ್ವಾಲಾ ಗುಟ್ಟಾ ಅಜರುದ್ದೀನ್ ಪುತ್ರ ಅಸಾದುದ್ದೀನ್ ಜತೆ ಅನೇಕ ಬಾರಿ ಕಾಣಿಸಿಕೊಂಡಿದ್ದರು.