ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆ ಹಾಕಿದ ಭಾರತದ ವನಿತೆಯರು

Sampriya

ಸೋಮವಾರ, 18 ನವೆಂಬರ್ 2024 (14:21 IST)
Photo Courtesy X
ರಾಜ್‌ಗಿರ್‌ (ಬಿಹಾರ): ಹಾಲಿ ಚಾಂಪಿಯನ್‌ ಭಾರತ ಮಹಿಳಾ ತಂಡವು ಅಜೇಯವಾಗಿ ಏಷ್ಯನ್‌ ಚಾಂಪಿಯನ್ಸ್‌ ಹಾಕಿ ಪಂದ್ಯಾವಳಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ಭಾನುವಾರ ಕೊನೆಯ ಲೀಗ್‌ ಪಂದ್ಯದಲ್ಲಿ ಸಲೀಮಾ ಟೇಟೆ ಪಡೆಯು 3-0 ಯಿಂದ ಜಪಾನ್‌ ತಂಡವನ್ನು ಮಣಿಸಿದೆ.

ಭಾರತ ತಂಡದ ಉಪನಾಯಕಿ ನವನೀತ್‌ ಕೌರ್‌ 37ನೇ ನಿಮಿಷದಲ್ಲಿ, ದೀಪಿಕಾ 47ನೇ ಹಾಗೂ 48ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ಈ ಸಾಧನೆಯೊಂದಿಗೆ ದೀಪಿಕಾ ಪಂದ್ಯಾವಳಿಯಲ್ಲೇ ಅತೀ ಹೆಚ್ಚು 10 ಗೋಲು ಹೊಡೆದ ಸಾಧನೆಗೆ ಪಾತ್ರವಾದರು.

ಐದೂ ಪಂದ್ಯಗಳನ್ನು ಗೆದ್ದ ಭಾರತ ಗರಿಷ್ಠ 15 ಅಂಕಗಳೊಂದಿಗೆ ಲೀಗ್‌ನಲ್ಲಿ ಅಗ್ರಸ್ಥಾನ ಅಲಂಕರಿಸಿತು. ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಚೀನ ದ್ವಿತೀಯ ಸ್ಥಾನಿಯಾಗಿದೆ (12 ಅಂಕ). ಶನಿವಾರ ಚೀನಾವನ್ನು ಮಣಿಸಿದಾಗಲೇ ಭಾರತದ ಸೆಮಿಫೈನಲ್‌ ಖಾತ್ರಿಯಾಗಿತ್ತು. ಮಲೇಷ್ಯಾ 3ನೇ ಹಾಗೂ ಜಪಾನ್‌ 4ನೇ ಸ್ಥಾನದೊಂದಿಗೆ ಲೀಗ್‌ ಸ್ಪರ್ಧೆಗಳನ್ನು ಮುಗಿಸಿದವು.

ಮಂಗಳವಾರ ನಡೆಯುವ ಸೆಮಿ ಫೈನಲ್‌ನಲ್ಲಿ ಭಾರತ 4ನೇ ಸ್ಥಾನಿ ಯಾದ ಜಪಾನ್‌ ವಿರುದ್ಧ ಸೆಣಸ ಲಿದೆ. ಇನ್ನೊಂದು ಸೆಮಿಫೈನಲ್‌ ಚೀನ  ಮಲೇಷ್ಯಾ ನಡುವೆ ಸಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ