ಹಾಕಿ ದಿಗ್ಗಜ ಧ್ಯಾನ್ ಚಂದ್‌ಗೆ ನಮಸ್ಕರಿಸಿದ ಹಾಕಿ ಆಟಗಾರರು

Sampriya

ಶನಿವಾರ, 10 ಆಗಸ್ಟ್ 2024 (16:22 IST)
Photo Courtesy X
ನವದಹಲಿ: 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಭಾರತೀಯ ಹಾಕಿ ತಂಡದ ಆಟಗಾರರು ತಾಯ್ನಾಡಿಗೆ ಮರಳುತ್ತಿದ್ದ ಹಾಗೇ ಹಾಕಿ ಲೆಜೆಂಡ್ ಮೇಜರ್ ಧ್ಯಾನ್ ಚಂದ್ ಅವರಿಗೆ ಗೌರವ ಸಲ್ಲಿಸಿದರು. ಕ್ರೀಡಾಂಗಣಕ್ಕೆ ಆಗಮಿಸಿದ ತಂಡವು ದಂತಕಥೆಗೆ ಗೌರವ ಸಲ್ಲಿಸಿ, ಕಂಚಿನ ಪದಕದೊಂದಿಗೆ ಫೋಟೋಗೆ ಪೋಸ್ ನೀಡಿದರು.

ಭಾವೋದ್ವೇಗಕ್ಕೆ ಒಳಗಾದ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು, "ಪ್ಯಾರಿಸ್ 2024 ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ  ಗೆದ್ದ ನಮ್ಮನ್ನು ಸ್ವಾಗತಿಸಲು ಮತ್ತು ಅಭಿನಂದಿಸಲು ಭಾರತೀಯ ಅಭಿಮಾನಿಗಳು ಬರುವುದನ್ನು ನೋಡುವುದು ಹೃದಯಸ್ಪರ್ಶಿಯಾಗಿದೆ.  ಒಲಿಂಪಿಕ್ಸ್‌ಗೆ ತಯಾರಿ ನಡೆಸುವುದರಲ್ಲಿ ತಂಡವು ಯಾವುದೇ ಪ್ರಯತ್ನವನ್ನು ಬಿಟ್ಟುಕೊಟ್ಟಿಲ್ಲ. ಅದರ ಫಲವನ್ನು ಇಂದು ಇಡೀ ದೇಶವೇ ಸಂಭ್ರಮಿಸುತ್ತಿದೆ. ಇದನ್ನು ನೋಡುವುದು ವಿವರಿಸಲಾಗದ ಭಾವನೆ ಎಂದು ಖುಷಿ ವ್ಯಕ್ತಪಡಿಸಿದರು.

ಉಪನಾಯಕ ಮತ್ತು ಎರಡು ಬಾರಿ ಕಂಚಿನ ಪದಕ ವಿಜೇತ, 25 ವರ್ಷದ ಹಾರ್ದಿಕ್ ಸಿಂಗ್ ಅವರು ಈ ವೇಳೆ ಮಾತನಾಡಿ,  ತಂಡದೊಳಗಿನ ಆಳವಾದ ಒಡನಾಟವನ್ನು ಹೊಗಳಿದರು, ಅವರ ಯಶಸ್ಸಿನಲ್ಲಿ ಅದರ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಿದರು.

ಪ್ಯಾರಿಸ್ 2024 ರ ಒಲಿಂಪಿಕ್ಸ್‌ನಲ್ಲಿ, ಭಾರತೀಯ ಪುರುಷರ ಹಾಕಿ ತಂಡವು ತಮ್ಮ ಅದ್ಭುತ ಆಟದ ಮೂಲಕ ಜಗತ್ತನ್ನು ಸೂರೆಗೊಂಡಿತು. ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ 3-2 ಜಯವು 52 ವರ್ಷಗಳಲ್ಲಿ ಆಸೀಸ್ ವಿರುದ್ಧ ಅವರ ಮೊದಲ ಒಲಿಂಪಿಕ್ ವಿಜಯವನ್ನು ಗುರುತಿಸಿತು. ಈ ಮೂಲಕ ದೊಡ್ಡ ಇತಿಹಾಸವನ್ನು ಬರೆಯಿತು. ಕಂಚಿನ ಪದಕ್ಕಾಗಿ ಸ್ಪೇನ್ ವಿರುದ್ಧ ನಡೆದ ಸ್ಪರ್ಧೆಯಲ್ಲಿ ಭಾರತ 2-1 ಅಂತರದಲ್ಲಿ ಗೆಲುವು ಸಾಧಿಸಿತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ