ಏಷ್ಯನ್ ಗೇಮ್ಸ್: ಶಾಟ್ ಪುಟ್ ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಕಿರಣ್ ಬಾಲಿಯನ್
ಶಾಟ್ ಪುಟ್ ನಲ್ಲಿ ಕಳೆದ 72 ವರ್ಷಗಳಲ್ಲಿ ಭಾರತ ಏಷ್ಯಾಡ್ ಪದಕ ಗೆದ್ದಿರಲಿಲ್ಲ. ಇದಕ್ಕೆ ಮೊದಲು 1951 ರಲ್ಲಿ ಆಂಗ್ಲೋ-ಇಂಡಿಯನ್ ತಾರೆ ಬಾರ್ಬರಾ ವೆಬ್ ಸ್ಟರ್ ಶಾಟ್ ಪುಟ್ ನಲ್ಲಿ ಕಂಚು ಗೆದ್ದಿದ್ದರು. ಇದೀಗ ಕಿರಣ್ ಕಂಚು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಒಟ್ಟು 17.36 ಮೀ. ದೂರ ಎಸೆದ ಕಿರಣ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಇದೀಗ ಭಾರತ 8 ಚಿನ್ನದ ಪದಕದೊಂದಿಗೆ ಭಾರತ ಒಟ್ಟು 33 ಪದಕ ತನ್ನದಾಗಿಸಿಕೊಂಡಿದೆ. ಇದೀಗ ಮಹಿಳೆಯರ ಗಾಲ್ಫ್ ನಡೆಯುತ್ತಿದ್ದು ಬೆಂಗಳೂರು ಮೂಲದ ಅದಿತಿ ಅಶೋಕ್ ಮುನ್ನಡೆ ಕಾಯ್ದುಕೊಂಡಿದ್ದಾರೆ.