ಏಷ್ಯನ್ ಗೇಮ್ಸ್: ಶೂಟಿಂಗ್ ನಲ್ಲಿ ಮತ್ತೊಂದು ಚಿನ್ನ, ಇಂದು ಮತ್ತಷ್ಟು ಪ್ರಮುಖರು ಕಣದಲ್ಲಿ

ಗುರುವಾರ, 28 ಸೆಪ್ಟಂಬರ್ 2023 (09:10 IST)
Photo Courtesy: Twitter
ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರಿದಿದೆ. ಇಂದು ಶೂಟಿಂಗ್ ನಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.

10 ಮೀ.ಏರ್ ಪಿಸ್ತೂಲ್ ಗ್ರೂಪ್ ಈವೆಂಟ್ ನಲ್ಲಿ ಭಾರತೀಯ ಶೂಟರ್ ಗಳಾದ ಸರಬ್ಜೊತ್ ಸಿಂಗ್, ಅರ್ಜುನ್ ಸಿಂಗ್ ಛೀಮಾ, ಶಿವ ನರ್ವಾಲ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದು ಈ ಗೇಮ್ಸ್ ನಲ್ಲಿ ಭಾರತದ 6 ನೇ ಚಿನ್ನದ ಪದಕವಾಗಿದೆ.

ಇಂದು ಭಾರತ ಮತ್ತೆ ಎರಡು ಚಿನ್ನದ ಪದಕದ ನಿರೀಕ್ಷೆಯಲ್ಲಿದೆ. ವುಶು ಸ್ಟಾರ್ ರೊಶಿಬಿನಾ ದೇವಿ ನಿನ್ನೆ ಫೈನಲ್ ನಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ