ಬೋಪಣ್ಣ ಒಲಿಂಪಿಕ್ಸ್‌ನಲ್ಲಿ ಸಾಕೇತ್ ಮೈನೇನಿ ಜತೆ ಡಬಲ್ಸ್ ಆಡಲು ಇಚ್ಛಿಸಿದ್ದರು. ಆದರೆ ಭಾರತ ಟೆನ್ನಿಸ್ ಸಂಸ್ಥೆ ಅದಕ್ಕೆ ಸಮ್ಮತಿಸಲಿಲ್ಲ. ಹೀಗಾಗಿ ಪಯಸ್ ಜತೆ ಒಲಿಂಪಿಕ್ಸ್ ಡಬಲ್ಸ್ ಆಡಬೇಕಾಗಿದೆ. ''ಕೆಲವು ಪ್ರಸಂಗಗಳನ್ನು ಮರೆಯುವುದೇ ಒಳ್ಳೆಯದು '' ಎಂದು ಬೋಪಣ್ಣ ಅಭಿಪ್ರಾಯಪಟ್ಟರು. ಎಟಿಪಿ ಪ್ರವಾಸದಲ್ಲಿ ಕಠಿಣ ಮತ್ತು ಏಕಾಂಗಿ ಜೀವನವು ಇಂತಹ ಹಿನ್ನಡೆಗಳನ್ನು ತಾಳಿಕೊಳ್ಳಲು ನೆರವಾಗಿದ್ದಾಗಿ ಕ್ರೆಡಿಟ್ ನೀಡಿದರು.
ನಾವು ಹಿಂದಿನದ್ದನ್ನು ನೆನಸಿಕೊಳ್ಳುತ್ತಾ ಇರುವುದು ಸಾಧ್ಯವಿಲ್ಲ. ಇಂದಿನ ಸನ್ನಿವೇಶವನ್ನು ನೋಡಿ ಮುನ್ನೋಟವನ್ನು ವೀಕ್ಷಿಸಬೇಕು ಎಂದು ಬೋಪಣ್ಣ ಹೇಳಿದರು. ಇಂದಿನ ವಿಷಯ ನಾನು ಮತ್ತು ಲಿಯಾಂಡರ್ ರಿಯೊಗೆ ತೆರಳುವುದು. ನಾವು ಅಭ್ಯಾಸ ಮಾಡುತ್ತಿದ್ದು, ರಿಯೊಗೆ ಮುಂಚೆ ನಮಗೆ ನಾಲ್ಕರಿಂದ ಐದು ದಿನಗಳಿರುತ್ತವೆ. ನಾನು ಟೊರಂಟೊ ಬಳಿಕ ನೇರವಾಗಿ ರಿಯೊಗೆ ತೆರಳುತ್ತೇನೆ. ಲಿಯಾಂಡರ್ ಕೂಡ ಅಲ್ಲಿರುತ್ತಾರೆ. ಆ ಕೆಲವು ದಿನಗಳು ನಾವು ಸಾಧ್ಯವಾದಷ್ಟು ಅಭ್ಯಾಸ ಮಾಡಿ ಸಿದ್ದರಾಗುತ್ತೇವೆ ಎಂದು ಬೋಪಣ್ಣ ಹೇಳಿದರು.