ಪುರುಷರ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಸಾಂತ್ವನದ ನುಡಿ

ಶನಿವಾರ, 18 ಜೂನ್ 2016 (13:37 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಭಾರತದ ಪುರುಷರ ಹಾಕಿ ತಂಡ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ  ಸೋಲಪ್ಪಿದ ಬಳಿಕ ತಂಡಕ್ಕೆ ಸಾಂತ್ವನದ ನುಡಿಯನ್ನು ಹೇಳಿದರು. ಟ್ವಿಟರ್‌ನಲ್ಲಿ ಈ ಕುರಿತು ಭಾರತ ಹಾಕಿ ತಂಡದ ಹೋರಾಟದ ಮನೋಭಾವ ಮತ್ತು ವೀರೋಚಿತ ಪ್ರಯತ್ನವನ್ನು ಶ್ಲಾಘಿಸಿದರು. ಇಡೀ ತಂಡದ ಬಗ್ಗೆ ದೇಶವು ಹೆಮ್ಮೆಯನ್ನು ಹೊಂದಿರುವುದಾಗಿ ತಿಳಿಸಿದರು. 
 
ಆಸ್ಟ್ರೇಲಿಯಾ ವಿರುದ್ಧ ಭಾರತ 36ನೇ ಚಾಂಪಿಯನ್ಸ್ ಟ್ರೋಫಿಯ ಶೂಟ್‌ಔಟ್‌ನಲ್ಲಿ 1-3ರಿಂದ ಸೋತಬಳಿಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದೆ. ಹರ್ಮನ್‌ಪ್ರೀತ್ ಸಿಂಗ್ ಮಾತ್ರ ಶೂಟ್‌ಔಟ್‌ನಲ್ಲಿ ಸ್ಕೋರ್ ಮಾಡಲು ಸಾಧ್ಯವಾಗಿದೆ.  ಎಸ್.ಕೆ. ಉತ್ತಪ್ಪಾ, ಸುನಿಲ್ ಮತ್ತು ಸುರೇಂದರ್ ಕುಮಾರ್ ಗೋಲು ಹಾಕಲು ವಿಫಲರಾದರು. ಆಸ್ಟ್ರೇಲಿಯಾ 3-1ರಿಂದ ಮುನ್ನಡೆ ಸಾಧಿಸಿ ಗೆಲುವು ಗಳಿಸಿತು. 
 
ಭಾರತದ ಆಟಗಾರರು ಎದುರಾಳಿಗಳ ವಿರುದ್ಧ ಫೈನಲ್‌ನಲ್ಲಿ ರಕ್ಷಣಾತ್ಮಕ ಆಟವಾಡಿತು. ಕೊನೆಯ ಗಳಿಗೆವರೆಗೆ ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಡದೇ ಪಂದ್ಯದ ಫಲಿತಾಂಶವನ್ನು ಶೂಟ್‌ಔಟ್ ಮೂಲಕ ನಿರ್ಧರಿಸಲಾಯಿತು. ಆದರೆ ಶೂಟ್‌ಔಟ್‌ನಲ್ಲಿ 3-1ರಿಂದ ಸೋಲಪ್ಪಿತು. ಸುದೀರ್ಘ ಕಾಲದ ಬಳಿಕ ಇದನ್ನು  ಭಾರತ ತಂಡ ರಕ್ಷಣಾತ್ಮಕ ಪ್ರದರ್ಶನ ಎಂದು ಅನೇಕ ಮಂದಿ ನಂಬಿದ್ದಾರೆ. ಸೋತರೂ ಕೂಡ ಟೀಂ ಇಂಡಿಯಾ ಫೈನಲ್‌ನಲ್ಲಿ ನೀಡಿದ ಪ್ರದರ್ಶನದ ಬಗ್ಗೆ ತೃಪ್ತಿಹೊಂದಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ