ಭಾರತ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಪೆನಾಲ್ಟಿ ಶೂಟ್‍ಔಟ್‌ನಲ್ಲಿ 1-3ರಿಂದ ಸೋಲಪ್ಪುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಹೊಂದಿದೆ. ಶೂಟ್‌ಔಟ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಮಾತ್ರ ಸ್ಕೋರ್ ಮಾಡಲು ಸಾಧ್ಯವಾಯಿತು. ಉತ್ತಪ್ಪಾ, ಸುನಿಲ್ ಮತ್ತು ಸುರೇಂದರ್ ಕುಮಾರ್ ಎಲ್ಲರೂ ಶೂಟ್‌ಔಟ್‌ನಲ್ಲಿ ಗುರಿತಪ್ಪಿದರು. ಎರಡೂ ತಂಡಗಳಿಗೆ ತಲಾ ನಾಲ್ಕು ಶೂಟ್‌ಔಟ್ ಅವಕಾಶಗಳನ್ನು ನೀಡಲಾಗುತ್ತದೆ.
ಆಸ್ಟ್ರೇಲಿಯಾ 3-1ರಿಂದ ಮುನ್ನಡೆ ಸಾಧಿಸಿ ಜಯಗಳಿಸಿತು. ಆಸ್ಟ್ರೇಲಿಯಾ ಪರ ಅರಾನ್ ಜೆಲೆವ್‌ಸ್ಕಿ, ಡಾನಿಯಲ್ ಬೀಲೆ ಮತ್ತು ಸೈಮನ್ ಆರ್ಚರ್ಡ್ ಸ್ಕೋರ್ ಮಾಡಿದರು. ಟ್ರೆಂಟ್ ಮಿಟ್ಟನ್ ಪ್ರಯತ್ನವನ್ನು ಮಾತ್ರ ಶ್ರೀಜೇಶ್ ತಡೆದರು. ಶೂಟ್‌ಔಟ್‌ನಲ್ಲಿ ನಾಟಕೀಯ ವಿದ್ಯಮಾನವೂ ನಡೆಯಿತು. ಬೀಲೆ ಶಾಟ್‌ನಲ್ಲಿ ಸ್ಕೋರ್ ಮಾಡಲು ವಿಫಲರಾದ ನಂತರ ವಿಡಿಯೊ ರಿವ್ಯೂ ಕೇಳಿದ ಬಳಿಕ ಅವರಿಗೆ ಪುನಃ ಅವಕಾಶ ನೀಡಲಾಯಿತು.