ಪಿಬಿಎಲ್ ವಾರ್ ಗೆದ್ದ ಚೆನ್ನೈ ವಾರಿಯರ್ಸ್
ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ತಂಡಕ್ಕೆ ಚಾಂಪಿಯನ್ ಪಟ್ಟ ಲಭಿಸಿದೆ. ಎರಡೂ ತಂಡಗಳು ಸಮಬಲ ಹೋರಾಟ ನೀಡಿತ್ತು. ಆದ್ದರಿಂದ ಕೊನೆಯಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯ ನಿರ್ಣಾಯಕವಾಗಿತ್ತು. ಈ ಪಂದ್ಯದಲ್ಲಿ ಮುಂಬೈನ ಅಜಯ್ ಜಯರಾಮ್ ಸೋಲೊಪ್ಪುವುದರೊಂದಿಗೆ ಚೆನ್ನೈ ಗೆಲುವು ಖಾತ್ರಿಯಾಯ್ತು.
ಮಹಿಳಾ ಸಿಂಗಲ್ಸ್ ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಪಿ ವಿ ಸಿಂಧು ಜಯಗಳಿಸಿ ತಂಡಕ್ಕೆ ಮುನ್ನಡೆ ಕೊಡಿಸಿದ್ದರು. ಆದರೆ ಡಬಲ್ಸ್ ವಿಭಾಗದಲ್ಲಿ ಮುಂಬೈ ತಿರುಗೇಟು ನೀಡಿತ್ತು. ಕೊನೆಗೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಜಯ ಗಳಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.