ಒಲಿಂಪಿಕ್ಸ್ ಪದಕ ಗೆದ್ದವರಿಗೆ ಕೋಟಿ ಕೋಟಿ ಬಹುಮಾನ: ಸಿಎಂ ಬಿಎಸ್ ವೈ ಘೋಷಣೆ
ಗುರುವಾರ, 15 ಜುಲೈ 2021 (09:50 IST)
ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ ಕೋಟಿ ಕೋಟಿ ಬಹುಮಾನ ಮೊತ್ತ ಸಿಗಲಿದೆ. ಹೀಗಂತ ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಚಿನ್ನದ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುವಿಗೆ 5 ಕೋಟಿ, ಬೆಳ್ಳಿ ಗೆದ್ದರೆ 3 ಕೋಟಿ ಮತ್ತು ಕಂಚಿನ ಪದಕ ಗೆದ್ದರೆ 2 ಕೋಟಿ ರೂ. ಬಹುಮಾನ ಮೊತ್ತವನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲೇ ಬಂಪರ್ ಬಹುಮಾನ ಮೊತ್ತ ಘೋಷಣೆ ಮಾಡಲಾಗಿದೆ. ಇದಲ್ಲದೆ ಕೇಂದ್ರದಿಂದಲೂ ಪ್ರತ್ಯೇಕವಾಗಿ 75 ಲಕ್ಷ ರೂ. ಬಹುಮಾನ ಸಿಗಲಿದೆ. ಈಗಾಗಲೇ ಉತ್ತರ ಪ್ರದೇಶ, ಹರ್ಯಾಣ, ಒಡಿಶಾ, ಚಂಡೀಗಢ, ಗುಜರಾತ್, ದೆಹಲಿ, ರಾಜಸ್ಥಾನ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಸಿಕ್ಕಿಂ, ಗೋವಾ, ಮೇಘಾಲಯ, ಪ.ಬಂಗಾಲ, ಜಮ್ಮು-ಕಾಶ್ಮೀರ ರಾಜ್ಯಗಳು ಕ್ರೀಡಾಪಟುಗಳಿಗೆ ಬಹುಮಾನ ಮೊತ್ತ ಘೋಷಣೆ ಮಾಡಿದೆ.