ಒಲಿಂಪಿಕ್ಸ್ ಗೆ ತೆರಳಲಿರುವವರಿಗೆ ಮೋದಿ ಕಿವಿಮಾತು

ಬುಧವಾರ, 14 ಜುಲೈ 2021 (09:26 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಗೆ ತೆರಳಲಿರುವ ಕ್ರೀಡಾಳುಗಳೊಂದಿಗೆ ನಿನ್ನೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಮೋದಿ ಅವರಿಗೆ ಕೆಲವೊಂದು ಕಿವಿ ಮಾತು ಹೇಳಿದ್ದಾರೆ.


ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು, ಬಾಕ್ಸರ್ ಮೇರಿ ಕೋಮ್, ಟಿಟಿ ಸ್ಪರ್ಧಿ ಮಣಿಕ್ ಬಾತ್ರಾ, ಶರತ್ ಕಮಲ್ ಸೇರಿದಂತೆ ಪ್ರಮುಖ ಕ್ರೀಡಾಗಳುಗಳು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ವೇಳೆ ಕ್ರೀಡಾಕಲಿಗಳಿಗೆ ಕಿವಿ ಮಾತು ಹೇಳಿದ ಮೋದಿ, ಜನರ ನಿರೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಒಲಿಂಪಿಕ್ಸ್ ನಲ್ಲಿ ಅತ್ಯುತ್ತಮ ಸಾಧನೆ ಬಗ್ಗೆ ಗಮನಹರಿಸಿ ಎಂದಿದ್ದಾರೆ. ಇನ್ನು, ಒಲಿಂಪಿಕ್ಸ್ ನಿಂದ ಬಂದ ಮೇಲೆ ನಿಮ್ಮೆಲ್ಲರನ್ನೂ ಭೇಟಿ ಮಾಡಲು ಇಚ್ಛಿಸುವೆ ಎಂದೂ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ