ಸ್ವಂತ ಹೊಟೆಲ್ ಆರಂಭಿಸಿದ ರೊನಾಲ್ಡೊ ಹೆಸರಿನಲ್ಲಿ ಏರ್‌ಪೋರ್ಟ್

ಶನಿವಾರ, 23 ಜುಲೈ 2016 (14:52 IST)
ಮೆಡೈರಾ:  ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಶುಕ್ರವಾರ ತಮ್ಮ ಸ್ವಂತ ಹೊಟೆಲ್ ಉದ್ಘಾಟನೆ ಮಾಡಿದ್ದಾರೆ. ಅವರ ಪ್ರಥಮಾಕ್ಷರ ಮತ್ತು ಶರ್ಟ್ ಸಂಖ್ಯೆಯ ಆಧಾರದ ಮೇಲೆ ಹೊಟೆಲ್‌ಗೆ ಸಿಆರ್‌7 ಎಂದು ಹೆಸರಿಟ್ಟಿದ್ದಾರೆ. ರೊನಾಲ್ಡೊ ತವರು ದ್ವೀಪ ಫಂಚಾಲ್‌ ವಿಮಾನನಿಲ್ದಾಣಕ್ಕೆ ರೊನಾಲ್ಡೊ ಗೌರವಾರ್ಥ ಅವರ ಹೆಸರಿನಲ್ಲಿ ಮರುನಾಮಕರಣ ಮಾಡಲಾಗಿದೆ.
 
ಯೂರೊ 2016ರ ಪ್ರಶಸ್ತಿಗೆ ಪೋರ್ಚುಗಲ್‌ ಸಾರಥ್ಯ ವಹಿಸಿದ ಬಳಿಕದ ಎರಡು ವಾರದಲ್ಲೇ ಸಮುದ್ರಕ್ಕೆ ಎದುರಾಗಿರುವ ಕೆಂಪು ಬಣ್ಣದ ಕಟ್ಟಡದ ಮೇಲ್ಛಾವಣಿಯಲ್ಲಿ ಬಿಳಿಯ ಬಣ್ಣದ ಬೇಸ್‌ಬಾಲ್ ಕ್ಯಾಪ್‍ನೊಂದಿಗೆ ರೊನಾಲ್ಡೊ ಕಾಣಿಸಿಕೊಂಡರು.
 
ಇದೊಂದು ವಿಚಿತ್ರವಾಗಿದೆ. ತಾನು 31ನೇ ವರ್ಷದಲ್ಲೇ ಹೊಟೆಲ್ ಉದ್ಯಮಿಯಾಗುತ್ತೇನೆಂದು ಕಲ್ಪಿಸಿಯೂ ಇರಲಿಲ್ಲ ಎಂದು ಜುಲೈ ಒಂದರಂದು ವ್ಯವಹಾರ ಆರಂಭಿಸಿದ ಹೊಟೆಲ್ ಕುರಿತು ಹೇಳಿದ್ದಾರೆ.
 
ಏತನ್ಮಧ್ಯೆ ಮಡೇರಾ ಪ್ರದೇಶದ ಅಧ್ಯಕ್ಷ ಮಿಗುಯೆಲ್ ಅಲ್‌ಬುಕರ್ಕಿ, ಸ್ಥಳೀಯ ವಿಮಾನನಿಲ್ದಾಣವನ್ನು ರೊನಾಲ್ಡೊ ಗೌರವಾರ್ಥ ಹೆಸರಿಸಲಾಗುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ