ಪಂಕಜ್ ಅಡ್ವಾಣಿ ಹೆಸರು ಪದ್ಮ ಭೂಷಣಕ್ಕೆ ಶಿಫಾರಸು

ಶುಕ್ರವಾರ, 9 ಸೆಪ್ಟಂಬರ್ 2016 (13:04 IST)
ಸ್ನೂಕರ್ ಮತ್ತು ಬಿಲಿಯರ್ಡ್ಸ್‌ನಲ್ಲಿ ಅಪ್ರತಿಮ ಸಾಧನೆಗೈದಿರುವ  ಕರ್ನಾಟಕದ ಪಂಕಜ್ ಅಡ್ವಾಣಿ ಅವರ ಹೆಸರನ್ನು ಬಿಎಸ್ಎಫ್ಐ (ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫೆಡರೇಷನ್) ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಭೂಷಣ ಪ್ರಶಸ್ತಿಗೆ ಮತ್ತೆ ಶಿಫಾರಸು ಮಾಡಿದೆ. 

ಬಿಲಿಯರ್ಡ್ಸ್ ಮತ್ತು ಸ್ನೂಕರ್‌ನಲ್ಲಿ 15 ಬಾರಿ ವಿಶ್ವ ಚಾಂಪಿಯನ್ ಆಗಿರುವ ಪಂಕಜ್ ಹೆಸರನ್ನು ಕಳೆದ ವರ್ಷವೂ ಬಿಎಸ್ಎಫ್ಐ ಪದ್ಮಭೂಷಣಕ್ಕೆ ಶಿಫಾರಸು ಮಾಡಿತ್ತು. ಆದರೆ ಸರ್ಕಾರದಿಂದ ಅದು ಪರಿಗಣಿತವಾಗಿರಲಿಲ್ಲ.
 
"ಹೌದು, ಈ ಬಾರಿ ಕೂಡ ನಾವು ಪ್ರಶಸ್ತಿಗಾಗಿ ಪಂಕಜ್ ಹೆಸರನ್ನು ಶಿಫಾರಸು ಮಾಡಿದ್ದೇವೆ. ಅವರದಕ್ಕೆ ಅರ್ಹ ಅಭ್ಯರ್ಥಿ. ಈ ಸಲ ಅವರಿಗೆ ಪ್ರಶಸ್ತಿ ಸಿಗುವ ವಿಶ್ವಾಸ ನಮ್ಮದು", ಎಂದು ಬಿಎಸ್ಎಫ್ಐ ಕಾರ್ಯದರ್ಶಿ ಎಸ್. ಬಾಲಸುಬ್ರಮಣಿಯನ್ ತಿಳಿಸಿದ್ದಾರೆ. 
 
ಅಡ್ವಾಣಿ ಈಗಾಗಲೇ ಪದ್ಮ ಶ್ರೀ(2009), ಖೇಲ್ ರತ್ನ( (2005-06) ಮತ್ತು ಅರ್ಜುನ್ ಪ್ರಶಸ್ತಿ (2004)ಯಿಂದ ಪುರಷ್ಕೃತರಾಗಿದ್ದಾರೆ.
 
ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಕೆಲಸ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರ, ನಾಗರಿಕ ಸೇವೆ, ವ್ಯಾಪಾರ ಮತ್ತು ಉದ್ಯಮ ಕ್ಷೇತ್ರಗಳಲ್ಲಿನ ವಿಶೇಷ, ಅಸಾಧಾರಣ ಸಾಧನೆ ಮತ್ತು ಸೇವೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
 
ಪದ್ಮ ಭೂಷಣಕ್ಕೆ ಹೆಸರು ನಾಮ ನಿರ್ದೇಶನ ಮಾಡಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ