ರಿಯೊ ಒಲಿಂಪಿಕ್ಸ್ ಪುರುಷರ ದೋಣಿ ಸ್ಪರ್ಧೆಯ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ದತ್ತು ಬೊಕನಲ್ ನಾಲ್ಕನೇ ಸ್ಥಾನ ಗಳಿಸಿದ್ದು, ಪದಕದ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ದತ್ತು 6: 59.89 ನಿಮಿಷಗಳಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಗಳಿಸಿದ ಪೋಲೆಂಡ್ ನಾಟನ್ ವೆಗ್‌ರಿಜ್ಕಿಗಿಂತ 6 ಸೆಕೆಂಡ್ಸ್ ಹಿಂದುಳಿದರು.
ಮೊದಲ 500 ಮೀಟರ್‌ವರೆಗೆ ಮೂರನೇ ಸ್ಥಾನದಲ್ಲಿದ್ದ ದತ್ತು ಬಳಿಗ ವೇಗ ಮತ್ತು ತೀವ್ರತೆ ತಗ್ಗಿದ್ದರಿಂದ ಟಾಪ್ 3 ಮುಟ್ಟುವ ಅವಕಾಶ ಕಳೆದುಕೊಂಡರು. 1000 ಮೀ ಹಂತದಲ್ಲಿ 3: 23.66 ಸಮಯದಲ್ಲಿ ತಲುಪಿದ್ದರು. 1500 ಮೀಟರ್ ದೂರವನ್ನು 5: 11.68 ನಿಮಿಷದಲ್ಲಿ ಕ್ರಮಿಸಿದ್ದರು. ಆದರೆ ಅಂತಿಮ ಗೆರೆಯ ಹತ್ತಿರ ಯಾವುದೇ ಪ್ರಗತಿ ಸಾಧಿಸದೇ ಹಿಂದುಳಿದರು. ಕ್ರೊವೇಷಿಯಾದ ಡಮಿರ್ ಮಾರ್ಟಿನ್ 6:44.44 ಸಮಯದಲ್ಲಿ ಮುಟ್ಟಿ ಟಾಪ್ ಸ್ಥಾನ ಗಳಿಸಿದರು ಮತ್ತು ಗ್ರೇಟ್ ಬ್ರಿಟನ್ ಅಲನ್ ಕ್ಯಾಂಪ್‌ಬೆಲ್ 6: 49.41 ಸಮಯದಲ್ಲಿ ಮುಟ್ಟಿ ಎರಡನೇ ಸ್ಥಾನ ಗಳಿಸಿದರು.